Friday, September 12, 2008

ಪ್ರಕಟಣೆ - ೨೯ಛಂದ ಪುಸ್ತಕ ಸಂಭ್ರಮ

ಮಾನ್ಯರೆ,

ಕುಂವೀ ಕನ್ನಡ ಸಾಹಿತ್ಯ ಲೋಕ ಕಂಡ ವಿಶಿಷ್ಟ ಕತೆಗಾರ. ಬೆಚ್ಚಿ ಬೀಳಿಸುವ ಲೋಕವೊಂದನ್ನು ತನ್ನ ವಿಕಟ ನಿರೂಪಣೆಯಿಂದಲೇ ಬಿಚ್ಚಿಟ್ಟ ದಿಟ್ಟ ಕತೆಗಾರ. ಕತೆ ಹೇಳಲು ಎಂದೂ ಆಯಾಸಗೊಳ್ಳದ ಸೃಜನಶೀಲತೆಯ ಅಕ್ಷಯ ಪಾತ್ರೆ.

ಈ ಅಪರೂಪದ ಕತೆಗಾರನ ಜೊತೆ ಈ ಭಾನುವಾರದ ಸಂಜೆಯನ್ನು ಕಳೆಯಲು ಚಂದ ಪುಸ್ತಕವು ಅವಕಾಶ ಮಾಡಿ ಕೊಡುತ್ತಿದೆ. ಮಳೆಯ ನೆಪವೊಡ್ಡದೆ ದಯವಿಟ್ಟು ಬನ್ನಿ.

ದಿನಾಂಕ: ೧೪ ನೇ ಸೆಪ್ಟೆಂಬರ್ ೨೦೦೮ ಭಾನುವಾರ
ವೇಳೆ: ಸಂಜೆ ೩.೩೦ ಗೆ
ಸ್ಥಳ: ಎನ್.ಎಮ್.ಕೆ.ಆರ್.ವಿ. ಮಹಿಳಾ ಕಾಲೇಜು.
ಶಾಶ್ವತಿ ಸಭಾಂಗಣ
ಜಯನಗರ ೩ ನೇ ಬ್ಲಾಕ್.
ಬೆಂಗಳೂರು- ೧೧

ಹೆಚ್ಚಿನ ವಿವರಗಳಿಗೆ ಲಗತ್ತಿಸಿದ ಚಿತ್ರವನ್ನು ನೋಡಿ ಅಥವಾ ಈ ಲಿಂಕನ್ನು ಕ್ಲಿಕ್ಕಿಸಿ
http://raghuapara.blogspot.com/2008/09/blog-post_08.html

ನಿಮ್ಮ ನಿರೀಕ್ಷೆಯಲ್ಲಿ,
--ವಸುಧೇಂದ್ರ

Wednesday, September 3, 2008

ಪ್ರಕಟಣೆ - ೨೮


ಅವಿರತ
ನಾಡಿಗಾಗಿ ನಿರಂತರ

ಅವಿರತ ನ್ಯಾಸದ ವತಿಯಿಂದ ಪೂರ್ಣಚಂದ್ರ ತೇಜಸ್ವಿಯವರ ಹುಟ್ಟುಹಬ್ಬದ ಪ್ರಯುಕ್ತ ಕಾರ್ಯಕ್ರಮಗಳು

ದಿನಾಂಕ: ೭ ಸೆಪ್ಟೆಂಬರ್ ೨೦೦೮ ಭಾನುವಾರ

ಸಂಜೆ ೪ ರಿಂದ ೫ -- ಅತಿಥಿಗಳಿಂದ ತೇಜಸ್ವಿ ಬಗ್ಗೆ ಒಂದು ಮಾತು
ಸಂಜೆ ೫ ರಿಂದ ೫.೩೦ -- ಕುವೆಂಪು ಗೀತ ಗಾಯನ
ಸಂಜೆ ೫.೩೦ ರಿಂದ ೬.೩೦ -- ಅವಿರತ ತಂಡಸಿಂದ ತೇಜಸ್ವಿ ಕಥಾ ಕನವರಿಕೆ
(ತೇಜಸ್ವಿಯವರ ಕಥೆಗಳಲ್ಲಿ ಬರುವ ಹಾಸ್ಯ ಪ್ರಸಂಗಗಳ ವಾಚನ)
ಸಂಜೆ ೬.೩೦ ಯಿಂದ ೮.೦೦ -- ತೇಜಸ್ವಿಯವರ ನಾಟಕ 'ಕಿರಗೂರಿನ ಗಯ್ಯಾಳಿಗಳು'
ತಂಡ: ರೂಪಾಂತರ ನಾಟಕ ರೂಪ
ನಿರ್ದೇಶನ: ಅ. ನಾ. ರಾವ್ ಜಾಧವ್
ಸ್ಥಳ: ಡಾ. ರಾಜ್ ಕುಮಾರ್ ಕಲಾಕ್ಷೇತ್ರ
ಆರ್.ಟಿ.ಓ ಕಛೇರಿ ವಾಣಿಜ್ಯ ಸಂಕೀರ್ಣ, ರಾಜಾಜಿನಗರ, ಬೆಂಗಳೂರು
ಟಿಕೇಟಗಳಿಗಾಗಿ ಸಂಪರ್ಕಿಸಿ:
ಸತೀಶ್ ಗೌಡ [೯೮೮೦೦ ೮೬೩೦೦]

Thursday, August 7, 2008

ಪ್ರಕಟಣೆ - ೨೭

ವಿಕಲಚೇತನ ಸೇವಾ ಸಂಸ್ಥೆ
ಆತ್ಮೀಯ ಆಮಂತ್ರಣ
ಸ್ನೇಹ ಮಿಲನ - ೨೦೦೮
ಆತ್ಮೀಯರೇ,
ತಮ್ಮ ಉದಾರ ಮನಸ್ಸಿನ ಸಹಾಯ ಹಸ್ತದಿಂದ ಹಲವಾರು ವಿಕಲಚೇತನರು ಸ್ವತಂತ್ರ ಜೀವನ ನಡೆಸುವ ಮಾರ್ಗದಲ್ಲಿ ಹೆಜ್ಜೆ ಹಾಕುತ್ತಿದ್ದಾರೆ.

ಸಹೃದಯರೇ, ಈ ದಿಸೆಯಲ್ಲಿ ನಮ್ಮ ಸಂಸ್ಥೆ ನಿಮಗಾಗಿ ಸ್ನೇಹ ಮಿಲನ ಕಾರ್ಯಕ್ರಮವನ್ನು ಏರ್ಪಡಿಸಿದೆ.ಈ ಶುಭ ಸಂದರ್ಭದಲ್ಲಿ ವಿಕಲಚೇತನರಲ್ಲಿ ಅಡಗಿರುವ ಸುಪ್ತ ಪ್ರತಿಭೆಯ ಪರಿಚಯವನ್ನು ತಮಗೆ ಮಾಡಿಸುವ ಉದ್ದೇಶ ನಮ್ಮದು.

ನಿಮ್ಮ ಸ್ನೇಹದ ಕೊಂಡಿಗಳನ್ನು ಮತ್ತಷ್ಟು ಬಲ ಪಡಿಸುವ ಉದ್ದೇಶದಿಂದ ಸಂಯೋಜಿಸಲಾಗಿರುವ ಈ ವಿಶೇಷ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಯಶಸ್ಸಿನ ಸಿಂಚನವನ್ನು ಎರೆಯಬೇಕಾಗಿ ವಿನಂತಿ.

ತಾರೀಖು: ಅಗಸ್ಟ್ ೧೦ ೨೦೦೮ , ಭಾನುವಾರ
ಸ್ಥಳ: ಬಿ.ಎಂ.ಶ್ರೀ.ಪ್ರತಿಷ್ಠಾನ, ೩ ನೇ ಮುಖ್ಯ ರಸ್ತೆ, ನರಸಿಂಹರಾಜ ಕಾಲೋನಿ ಬೆಂಗಳೂರು - ೫೬೦ ೦೧೯
ಸಮಯ: ಬೆಳಿಗ್ಗೆ ೧೦ ರಿಂದ ಮಧ್ಯಾಹ್ನ ೧.೩೦ ರ ವರೆಗೆ
ಭೋಜನ: ಮಧ್ಯಾಹ್ನ ೧.೩೦ ಕ್ಕೆ

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಎನ್. ಕೃಷ್ಣಮೂರ್ತಿ (ಎನ್.ಕೆ): ೯೪೪೯೩ ೪೨೯೪೦ [94493 42940]
--ವಂದನೆಗಳೊಂದಿಗೆ,
ಮಾರ್ಗದರ್ಶಿ ಕಾರ್ಯಕಾರಿ ಸಮಿತಿ

Tuesday, July 29, 2008

ಪ್ರಕಟಣೆ - ೨೬

ಸಾಹಿತ್ಯ ಸಂಸ್ಕೃತಿ ಪ್ರಕೃತಿ
ನುಡಿವ ವೀಣೆ ಕರ್ನಾಟಕ ಶಾಸ್ತ್ರೀಯ ಸಂಗೀತ ಸಂಜೆ

ವೀಣೆ: ವೈಣಿಕ ವಿದೂಷಿ ಹೆಚ್.ಕೆ.ಬಾಲಸರಸ್ವತಿ
ಮೃದಂಗ: ಡಾ ಹೆಚ್.ಎಸ್.ವೆಂಕಟೇಶ್
ಖಂಜರ್: ಶ್ರೀ ಭಾರ್ಗವ

ದಿನಾಂಕ: ೦೨ ಆಗಸ್ಟ್ ೨೦೦೮ ಶನಿವಾರ
ಸಮಯ: ಸಂಜೆ ೫.೩೦ ರಿಂದ ೭.೩೦ ರ ವರೆಗೆ
ಸ್ಥಳ: ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌
ಬಸವನಗುಡಿ. ಬೆಂಗಳೂರು - ೦೪

ಎಲ್ಲರಿಗೂ ಪ್ರಣತಿ ತಂಡದಿಂದ ನಲ್ಮೆಯ ಸ್ವಾಗತ

ಪ್ರಕಟಣೆ- ೨೫


"ಸಮಾಜ ಸೇವಕರ ದಿನಾಚರಣೆ"
ಆಗಸ್ಟ್ ೧, ೨೦೦೮

ಸಮಾಜ ಸೇವಕರ ಸಮಿತಿಯ
ಆರನೆಯ ವಾರ್ಷಿಕೋತ್ಸವ ಸಮಾರಂಭ

ಅಧ್ಯಕ್ಷತೆ
ಡಾ ಆರ್. ಗಣೇಶ್ ಶತಾವಧಾನಿಗಳು
ಶ್ರೀ ಡಿ.ವಿದ್ಯಾಸಾಗರ್
ಶ್ರೀ ಹೆಚ್.ಸಿ.ಮಧುಸೂದನ್ ರಾವ್
--------------------------------------------------------------
-:ಸಾಂಸ್ಕೃತಿಕ ಕಾರ್ಯಕ್ರಮಗಳು:-

ಭಾವಗೀತೆಗಳ ಗಾಯನ
ಡಾ ರೋಹಿಣಿ ಮೋಹನ್ ಮತ್ತು ಶ್ರೀ ಪಂಚಮ್ ಹಳಿಬಂಡಿಯವರಿಂದ

ಪಕ್ಕವಾದ್ಯದಲ್ಲಿ
ಕೀಬೋರ್ಡ್ - ಶ್ರೀ ನವನೀತ್
ತಬಲ - ಶ್ರೀ ಹನುಮಂತ ಕಾರಟಗಿ

ಸಮಾಜ ಸೇವಕರ ಸಮಿತಿಯ ವೆಬ್-ಸೈಟ್ ಅನಾವರಣ

ದಿನಾಂಕ: ಆಗಸ್ಟ್ ೧, ೨೦೦೮ ಶುಕ್ರವಾರ
ಸಮಯ: ಸಂಜೆ ೫.೩೦ ರಿಂದ ೮.೦೦ ಗಂಟೆವರೆಗೆ
ಸ್ಥಳ: ನಯನ ಸಭಾಂಗಣ, ಕನ್ನಡ ಭವನ. ಜೆ.ಸಿ ರಸ್ತೆ. ಬೆಂಗಳೂರು - ೦೨

ಎಲ್ಲರಿಗೂ ಮುಕ್ತ ಹೃದಯದ ಸ್ವಾಗತ
ಸ್ವಾಗತ ಬಯಸುವವರು ಸಮಾಜ ಸೇವಕರ ಸಮಿತಿ ಎಲ್ಲಾ ಸದಸ್ಯರು


Wednesday, July 16, 2008

ಪ್ರಕಟಣೆ - ೨೪
ಆತ್ಮೀಯ ಗೆಳೆಯ/ಗೆಳತಿಯರೇ,

ಅಕ್ಕರೆಯ ಅಕ್ಷರ ಬಂಧುಗಳೆ, ನಿಮಗೆಲ್ಲ ಆತ್ಮೀಯ ಸ್ವಾಗತ

ಎಲ್ಲಿಗೆ: ಸುಚಿತ್ರಾ ಫಿಲ್ಮ್ ಸೊಸೈಟಿ, ಬನಶಂಕರಿ ೨ನೇ ಹಂತ. ಬೆಂಗಳೂರು.
ಎಂದು: ಜುಲೈ ೨೭ ನೇ ತಾರೀಖು ೨೦೦೮, ಭಾನುವಾರ.
ಸಮಯ: ಬೆಳಿಗ್ಗೆ ೧೦ ಗಂಟೆಗೆ

ಎರಡು ಅಕ್ಷರನೌಕೆಗಳ ಅಭಿಯಾನದಾರಂಭ ಸಮಾರಂಭ

ಪುಸ್ತಕಗಳು:
೧. ತುಳಸಿವನ - ಲಘು ಪ್ರಬಂಧ ಸಂಕಲನ
ಲೇಖಕಿ : ತುಳಸಿಯಮ್ಮ ಖ್ಯಾತಿಯ ತ್ರಿವೇಣಿ ಶ್ರೀನಿವಾಸ್

೨. ಭಾವಬಿಂಬ - ಕವನ ಸಂಕಲನ
ಲೇಖಕಿ: ಸುಪ್ತದೀಪ್ತಿ ಕಾವ್ಯನಾಮದ ಜ್ಯೋತಿ ಮಹಾದೇವ

ಅತಿಥಿಗಳು:
೧. ಶ್ರೀ ದೊಡ್ಡರಂಗೇಗೌಡ (ಕವಿ, ಚಿತ್ರ ಸಾಹಿತಿ ಮತ್ತು ವಿಧಾನ್ ಪರಿಷತ್ ಸದಸ್ಯರು)
೨. ಶ್ರೀ ಡಾ|| ಹೆಚ್.ಎಸ್.ವೆಂಕಟೇಶಮೂರ್ತಿ (ಕವಿ)
೩. ಶ್ರೀ ಗಿರೀಶ್.ಹೆಚ್.ರಾವ್ (ಜೋಗಿ)

ಆಹ್ವಾನ ಪತ್ರಿಕೆಗಾಗಿ ಚಿತ್ರ ನೋಡಿ.

--ಸ್ನೇಹದಿಂದ,
ತ್ರಿವೇಣಿ

ಪ್ರಕಟಣೆ - ೨೩
ಸ್ನೇಹಿತರೆ,

ಎರಡು ವರ್ಷಗಳ ಹಿಂದೆ ಬಿಡುಗಡೆಯಾಗಿ ಜನರ ಮತ್ತು ವಿಮರ್ಶಕರ ಮೆಚ್ಚುಗೆ ಗಳಿಸಿದ 'ಮಠ' ಚಿತ್ರದ ಬಗ್ಗೆ ಬಹಿರಂಗ ಚರ್ಚೆಗಳೇನೂ ಆಗಲಿಲ್ಲ. ಮೊಟ್ಟ ಮೊದಲ ಬಾರಿಗೆ ಕಲಾತ್ಮಕ ಮತ್ತು ವಾಣಿಜ್ಯ ಚಿತ್ರಗಳ ಗುಣಾತ್ಮಕ ಅಂಶಗಳ Fly Over ಅಂತ ಅನಿಸಿಕೊಂಡಿದ್ದು ಮಠ ಚಿತ್ರದ ಹೆಗ್ಗಳಿಕೆ.

ಮೌಲಿಕ ಕೃತಿ ಅಥವಾ ಚಿತ್ರದ ಬಗ್ಗೆ ಚರ್ಚೆ-ಸಂವಾದಗಳೇ ಕಡಿಮೆಯಾಗಿರುವ ಈ ದಿನಗಳಲ್ಲಿ ಇಗೋ 'ಕನ್ನಡಸಾಹಿತ್ಯ.ಕಾಂ'ನ ಈ ಪ್ರಯತ್ನ ನಿಮಗಾಗಿ

'ಮಠ' ಚಿತ್ರ ಪ್ರದರ್ಶನ ಮತ್ತು ಸಂವಾದ

ಅವತ್ತು ನಿಮ್ಮೊಂದಿಗಿರುವವರು: ಮಠ ಚಿತ್ರದ ನಿರ್ದೇಶಕ ಗುರುಪ್ರಸಾದ, ಕಲಾವಿದರು, ತಂತ್ರಜ್ಞರು

ಪ್ರದರ್ಶನ ಎಲ್ಲಿ? ವಿಳಾಸ?

‘ಶ್ರೀಗಂಧ ಪ್ರಿವ್ಯೂ ಥಿಯೇಟರ್’ (ರೇಣುಕಾಂಬ)
ಲಾವಣ್ಯ ಟವರ್ಸ್
ನಂ ೫೯, ೪ ನೆ ಮುಖ್ಯ ರಸ್ತೆ,
೧೮ ನೆ ಆಡ್ಡರಸ್ತೆ
ಮಲ್ಲೇಶ್ವರಂ
ಬೆಂಗಳೂರು- ೫೬೦ ೦೫೫

ದಿನಾಂಕ: ೨೦ ನೇ ಜುಲೈ ೨೦೦೮ ರವಿವಾರ
ಸಮಯ : ಮಧ್ಯಾಹ್ನ ೧ ಗಂಟೆಗೆ

ಹೆಚ್ಚಿನ ವಿವರಗಳು ಮತ್ತು ನಿಮ್ಮ ಆಸನ ಕಾದಿರಿಸಲು ಸಂವಾದ.ಕಾಂ ನ 'ಮಠ' ವಿಶೇಷ ಪುಟಕ್ಕೆ ಭೇಟಿ ಕೊಡಿ.


ಕನ್ನಡಸಾಹಿತ್ಯ.ಕಾಂ ಬಳಗ

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
೯೯೦೦೪೩೯೯೩೦ (ರವಿ ಅರೇಹಳ್ಳಿ)
೯೯೦೧೩೯೯೬೭೧ (ರಾಘವ ಕೋಟೇಕರ್)
೯೭೩೧೭೫೫೯೬೬ (ಎಂ ಕಿರಣ್, ಬೆಂಬಲಿಗರ ಬಳಗದ ನಿರ್ವಾಹಕರು)

Tuesday, July 15, 2008

ಪ್ರಕಟಣೆ - ೨೨ಮಾನ್ಯರೆ,

ನಿಮಗೆಲ್ಲರಿಗೂ ಟಿ.ಜಿ.ಶ್ರೀನಿಧಿಯವರಿಂದ ಒಂದು ಆತ್ಮೀಯ ಆಮಂತ್ರಣ.

ಯುವ ವಿಜ್ಞಾನ ಬರಹಗಾರ ಹಾಗೂ ಸಾಫ್ಟ್‌ವೇರ್ ತಂತ್ರಜ್ಞ ಟಿ.ಜಿ.ಶ್ರೀನಿಧಿಯವರ ಹೊಸ ಪುಸ್ತಕಗಳು - 'ವೆಬ್ ವಿಹಾರ' ಹಾಗೂ 'ಅವಕಾಶ ಅಪಾರ' - ಬರುವ ಜುಲೈ ೨೦ ರಂದು ಸಂಜೆ ಬೆಂಗಳೂರು ಬಸವನಗುಡಿಯ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನಲ್ಲಿ ಬಿಡುಗಡೆಯಾಗಲಿವೆ.

ಕಾರ್ಯಕ್ರಮದಲ್ಲಿ ಹಿರಿಯ ವಿಜ್ಞಾನ ಬರಹಗಾರರಾದ ಶ್ರೀ ನಾಗೇಶ ಹೆಗಡೆ, ಟಿ ಆರ್ ಅನಂತರಾಮು, ಕೊಳ್ಳೇಗಾಲ ಶರ್ಮ ಹಾಗೂ 'ವಿಶ್ವಕನ್ನಡ ಡಾಟ್ ಕಾಂ'ನ ಡಾ.ಯು.ಬಿ.ಪವನಜ ಉಪಸ್ಥಿತರಿರಲಿದ್ದಾರೆ.

ಹವ್ಯಾಸಿ ವಿಜ್ಞಾನ ಬರಹಗಾರರಾದ ಟಿ.ಜಿ.ಶ್ರೀನಿಧಿಯವರ ಮುನ್ನೂರಕ್ಕೂ ಹೆಚ್ಚು ಲೇಖನಗಳು ಹಾಗೂ ಎರಡು ಪುಸ್ತಕಗಳು ಈಗಾಗಲೇ ಪ್ರಕಟವಾಗಿವೆ. ಅವರು 'ಇ-ಜ್ಞಾನ' ಎಂಬ ವಿಜ್ಞಾನಕ್ಕೆ ಸಂಬಂಧಪಟ್ಟ ಕನ್ನಡ ಬ್ಲಾಗನ್ನೂ ನಡೆಸುತ್ತಿದ್ದಾರೆ.

ಬಿಡುಗಡೆಯಾಗುತ್ತಿರುವ ಹೊಸ ಪುಸ್ತಕಗಳ ಪರಿಚಯ ಹೀಗಿದೆ:

೧. ವೆಬ್ ವಿಹಾರ - ಅಂತರಜಾಲ ಲೋಕಕ್ಕೊಂದು ಬೆಳಕಿಂಡಿ
ಇದು ಅಂತರಜಾಲ (ಇಂಟರ್ ನೆಟ್) ಹಾಗೂ ವಿಶ್ವವ್ಯಾಪಿ ಜಾಲದ (WWW) ಸಂಕ್ಷಿಪ್ತ ಪರಿಚಯ ನೀಡಿ ಅದರ ಅನೇಕ ಸೌಲಭ್ಯಗಳನ್ನು ಬಳಸಲು ಓದುಗರಿಗೆ ನೆರವಾಗುವ ಪುಸ್ತಕ. ಮಾಹಿತಿ ಎಂದರೇನು ಎಂಬಲ್ಲಿಂದ ಪ್ರಾರಂಭಿಸಿ ಗಣಕ ಜಾಲಗಳು, ಅಂತರಜಾಲದ ಹುಟ್ಟು, ವಿಶ್ವವ್ಯಾಪಿ ಜಾಲ ಬೆಳೆದ ಬಗೆ, ಇಮೇಲ್, ಬ್ಲಾಗಿಂಗ್, ಇ-ಶಾಪಿಂಗ್, ಆನ್‌ಲೈನ್ ಬ್ಯಾಂಕಿಂಗ್,ಬ್ಲಾಗಿಂಗ್, ವಿಶ್ವವ್ಯಾಪಿ ಜಾಲವನ್ನು ಕಾಡುತ್ತಿರುವ ಸಮಸ್ಯೆಗಳು (ವೈರಸ್, ಫಿಷಿಂಗ್, ಮಾಲ್‌ವೇರ್, ಸ್ಪಾಮ್ ಇತ್ಯಾದಿ) ಮುಂತಾದ ಅನೇಕ ವಿಷಯಗಳನ್ನು ಇದು ವಿವರಿಸುತ್ತದೆ. ವಿಶ್ವವ್ಯಾಪಿ ಜಾಲದಲ್ಲಿ ಕನ್ನಡದ ಸ್ಥಿತಿಗತಿಗಳ ಬಗೆಗೂ ಬಹಳಷ್ಟು ಮಾಹಿತಿ ಇದೆ. ಅಂತರಜಾಲದಲ್ಲಿ ಕನ್ನಡದ ಬಳಕೆ ಬೆಳೆದುಬಂದ ಹಾದಿಯ ಹಿನ್ನೋಟದ ಜೊತೆಗೆ ಕನ್ನಡದ ಪ್ರಮುಖ ತಾಣಗಳ ಹಾಗೂ ಕುತೂಹಲಕರ ಬ್ಲಾಗುಗಳ ಪಟ್ಟಿ ಕೂಡ ಇದೆ. ಶ್ರೀ ನಾಗೇಶ ಹೆಗಡೆಯವರು ಮುನ್ನುಡಿ ಬರೆದಿದ್ದಾರೆ.

೨. ಅವಕಾಶ ಅಪಾರ
ಇದು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಲಭ್ಯವಿರುವ ಉದ್ಯೋಗಾವಕಾಶಗಳ ಬಗೆಗಿನ ಅಂಕಣ ಬರಹಗಳ ಸಂಕಲನ. ಅನಿಮೇಷನ್, ಡೇಟಾವೇರ್‌ಹೌಸಿಂಗ್, ಮೇನ್‌ಫ್ರೇಮ್ಸ್, ಬಿಸಿನೆಸ್ ಇಂಟೆಲಿಜೆನ್ಸ್ ಮುಂತಾದ ಕ್ಷೇತ್ರಗಳ ಬಗೆಗಿನ ಮೂವತ್ತಾರು ಲೇಖನಗಳಿರುವ ಈ ಪುಸ್ತಕಕ್ಕೆ ಡಾ.ಯು.ಬಿ.ಪವನಜರ ಮುನ್ನುಡಿ ಇದೆ.

ಧನ್ಯವಾದಗಳು.

---ತಮ್ಮ ವಿಶ್ವಾಸಿ,
ಟಿ ಜಿ ಶ್ರೀನಿಧಿ
srimysore@gmail.com

*Click on image to read the invitation

Thursday, July 3, 2008

ಪ್ರಕಟಣೆ - ೨೧
ಮಾನ್ಯರೇ,
ಎಸ್.ಒ.ಎಸ್.ಮಕ್ಕಳ ಗ್ರಾಮದ ಸಹಾಯ ನಿಧಿಯ ಉದ್ದೇಶದಿಂದ ಭಾವನೆಗಳಿಗೆ ಬಣ್ಣದ ಚಿತ್ತಾರ ಬೆರಸಿ,ಒಡಮೂಡಿದ ಕಲಾಕೃತಿಗಳನ್ನು ಕಣ್ತುಂಬ ನೋಡಿ,ಮನತುಂಬಾ ಹರಸುವಿರೆಂಬ ಆಶಯದೊಂದಿಗೆ ನಿಮ್ಮನ್ನು ನಮ್ಮ ಚಿತ್ರ ಪ್ರದರ್ಶನ ಕಾರ್ಯಕ್ರಮಕ್ಕೆ ಆಹ್ವಾನ ನೀಡುತ್ತಿದ್ದೇನೆ.

ಚಿತ್ರ ಪ್ರದರ್ಶನ : ಸ್ತ್ರೀತ್ವದ ಚಿತ್ರ ವ್ಯಾಖ್ಯೆ
ಶಿಲ್ಪ ಕಲಾಕೃತಿಗಳ ಪ್ರದರ್ಶನ : ಬಾಲಕಾಂಡದ ಮೋಜು ಹಾಗೂ ಕಲ್ಪನೆ
ಉದ್ಘಾಟಕರು : ಶ್ರೀ ಕೆ.ವಿ. ಸುಬ್ರಮಣ್ಯಂ,
ಖ್ಯಾತ ವಿಮರ್ಶಕರು
ಅತಿಥಿಗಳು : ಶ್ರೀ ಎಂ. ಕೆ. ಲೋಕೇಶ್,
ನಿರ್ದೇಶಕರು,
ಎಸ್.ಓ.ಎಸ್. ಮಕ್ಕಳ ಗ್ರಾಮ.

ಜುಲೈ ೩ ರ, ಬೆಳಿಗ್ಗೆ ೧೧ ಗಂಟೆಗೆ
ಚಿತ್ರಕಲಾ ಪರಿಷತ್, ಗ್ಯಾಲರಿ -೧,
ಕುಮಾರ ಕೃಪ ರಸ್ತೆ, ಬೆಂಗಳೂರು-೫೬೦೦೦೧

ನನ್ನೊಂದಿಗೆ ಕುಂಚಕಲಾವಿದರಾದ ಸಿ.ಎಸ್.ಶಶಿಧರ್, ಜೆ. ಕಡೂರ್, ರಾಘ್ ಪುತ್ತೂರ್ ಹಾಗೂ ಶಿಲ್ಪಿ ಡಿ.ರಂಗಸ್ವಾಮಿ ನಿಮ್ಮ ಬರುವಿಕೆಗಾಗಿ ದಾರಿ ಕಾಯುತ್ತಿರುತ್ತೇವೆ.

ಪ್ರದರ್ಶನವು ದಿನಾಂಕ ೩ , ೪ , ೫ ಹಾಗೂ ೬ ರ ಜುಲೈ ೨೦೦೮ ಬೆಳಗ್ಗೆ ೧೦ ರಿಂದ ಸಂಜೆ ೭ ರ ವರೆಗೆ ತೆರೆದಿರುತ್ತದೆ.

--ನಿಮ್ಮವ,
ಪ್ರಮೋದ್. ಪಿ. ಟಿ
ಕುಂಚ-ಪ್ರಪಂಚ.
www.kuncha-prapancha.blogspot.com

Thursday, June 19, 2008

ಪ್ರಕಟಣೆ - ೨೦ಐಟಿರಂಗ ಕನ್ನಡಿಗರಿಗೆ ಟೀ ಶರ್ಟ್ ನಲ್ಲಿ ಕನ್ನಡ ಮೂಡಿಸಿ ಚಿರಪರಿಚಿತ ಕ್ರಿಯಾಶೀಲ ನಿರ್ಮಾಪಕ ಸಾಕ್ಷಿರಾಜ್ ಅಲಿಯಾಸ್ ರಾಜ್ ಕುಮಾರ್ ಪ್ರಸ್ತುತಪಡಿಸುವ ಕಿರುಚಿತ್ರ

"ನಂ ಪ್ರೀತಿ"... ನಿರೀಕ್ಷೆ ಕೂಡದು
ಚಿತ್ರದ ಹೆಸರು 'ನಂ ಪ್ರೀತಿ' ಅಂತ. ಚಿತ್ರದ ಸಬ್ ಟೈಟಲ್ 'ನಿರೀಕ್ಷೆ ಕೂಡದು'!.
ಒಂದೇ ದಿನ ಕೇವಲ ೭ ಗಂಟೆಗಳಲ್ಲಿ 'ನಂ ಪ್ರೀತಿ' ಚಿತ್ರೀಕರಣಗೊಂಡಿದೆ. ಚಿತ್ರದ ಖರ್ಚು ಕೇವಲ ೨೦ ಸಾವಿರ ರು.ಗಳು.
೨೦ ನಿಮಿಷ ಕಾಲಾವಧಿ ಯ ಈ ಚಿತ್ರದಲ್ಲಿ ೩ ಹಾಡುಗಳು ಇವೆ.

ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ, ನಿರ್ದೇಶನ ಕವೀಶ್ ಶೃಂಗೇರಿ ಅವರದ್ದು. ನಾಯಕ ನಟನಾಗಿ ಕುಶಾಲ್ ರಾಘವೇಂದ್ರ ಹಾಗೂ ನಾಯಕಿಯಾಗಿ ನಿರ್ಮಲಾ ನಟಿಸಿದ್ದಾರೆ. ಛಾಯಾಗ್ರಹಣ ಸುನಿಲ್ ಶಿವಮೊಗ್ಗ , ಚಿತ್ರಕ್ಕೆ ಸಂಗೀತ ಆನಂದ ಎನ್.ಕುಮಾರ್. ನಿರ್ಮಾಪಕ ಸಾಕ್ಷಿರಾಜ್.

'ನಂ ಪ್ರೀತಿ' ಚಿತ್ರದ ಪ್ರೀಮಿಯರ್ ಷೋ
ಇದೇ ಭಾನುವಾರ ಜೂ.೨೨ ಸಂಜೆ ೪ ಗಂಟೆಗೆ ಸುಚಿತ್ರಾ ಫಿಲ್ಮ್ ಸೊಸೈಟಿಯಲ್ಲಿ ಆಯೋಜಿಸಲಾಗಿದೆ. ತಪ್ಪದೆ ಹೋಗಿ ವೀಕ್ಷಿಸಿ.
ಚಿತ್ರತಂಡದೊಂದಿಗಿನ ಸಂವಾದದಲ್ಲಿ ಭಾಗವಹಿಸಿ ನಿಮ್ಮ ಕುತೂಹಲವನ್ನು ತಣಿಸಿಕೊಳ್ಳಿ.
-----------------------------------------------------------------------------------------------
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ:
ರಾಜ್ ಕುಮಾರ್: ೯೪೪೮೧ ೭೧೦೬೯ [9448171069]
ರಾಘವೇಂದ್ರ: ೯೮೮೬೬ ೮೩೦೦೮ [9886683008]
------------------------------------------------------------------

Thursday, June 12, 2008

ಪ್ರಕಟಣೆ - ೧೯ಅರ್ಪಿಸುವ ಹೊಸ ನಾಟಕ

ಬಿಡಿ, ನಾನು ದೇವರಾಗಿರಬಲ್ಲೆ
(ಮಾನವನಂತಿರಲು ಬಂದ ದೇವರು)

ನಿರ್ದೇಶನ: ಹಿರಿಯಣ್ಣಯ್ಯ ಹಾರನಹಳ್ಳಿ
(ಖ್ಯಾತ ರಂಗಭೂಮಿ/ಕಿರುತೆರೆ/ಹಿರಿತೆರೆ ನಟರು)

ಸಂಗೀತ: ಶಶಿಧರ ಕೋಟೆ

ನೃತ್ಯ ಸಂಯೋಜನೆ: ದೀಪಾ ನಾರಾಯಣ್

ನಾಟಕದ ಅವಧಿ: ೯೫ ನಿಮಿಷಗಳು

ದಿನಾಂಕ: ೧೪ ನೇ ಜೂನ್ ಶನಿವಾರ ಮತ್ತು ೧೫ ನೇ ಜೂನ್ ರವಿವಾರ ಭಾನುವಾರ

ವೇಳೆ: ಸಂಜೆ ೬. ೪೫ಕ್ಕೆ

ಸ್ಥಳ: ಡಾ ಹೆಚ್. ಎನ್. ಕಲಾಕ್ಷೇತ್ರ
ನ್ಯಾಷನಲ್ ಕಾಲೇಜು, ಜಯನಗರ
ಬೆಂಗಳೂರು.

ಪ್ರವೇಶ ದರ : ರೂ ೫೦/-

ನೀವೂ ಬನ್ನಿ, ನಿಮ್ಮವರನ್ನೂ ಕರೆತನ್ನಿ
-----------------------------------------------------------------------------------
ಟಿಕೇಟ್ ಗಳಿಗಾಗಿ ಸಂಪರ್ಕಿಸಿ:
ಅಖಿಲಾ: ೯೮೮೦೨ ೭೭೪೭೦ [98802 77470]
ಮಧು: ೯೯೮೦೯ ೦೯೬೮೧ [99809 09681]
ಅರುಣ್: ೯೯೦೦೧ ೦೭೦೯೦ [99001 07090]
ಎಂ.ಡಿ: ೯೯೦೦೫ ೬೩೨೪೨ [99005 63242]
-----------------------------------------------------------------------------------

ಪ್ರಕಟಣೆ - ೧೮

ಕವನ ಸಂಕಲನದ ಬಿಡುಗಡೆ ಸಮಾರಂಭ

ಸ್ಥಳ : ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್
ಬಿ.ಪಿ.ವಾಡಿಯ ರಸ್ತೆ,
ಬಸವನಗುಡಿ ಪೋಲಿಸ್ ಸ್ಟೇಶನ್ ಹತ್ತಿರ,
ಬಸವನಗುಡಿ, ಬೆಂಗಳೂರು

ದಿನ : ಶನಿವಾರ, 14 ಜೂನ್ 2008

ಸಮಯ : ಬೆಳಿಗ್ಗೆ ೧೦:೩೦ರಿಂದ

ನೀವೂ ಬನ್ನಿ ....ನಿಮ್ಮ ಸ್ನೇಹಿತರನ್ನೂ ಜೊತೆಗೆ ಕರೆತನ್ನಿ

ಪುಸ್ತಕ ಬಿಡುಗಡೆ ಮತ್ತು ಸಭೆಯ ಅಧ್ಯಕ್ಷತೆ.....??

ಬಿಡುಗಡೆಯ ದಿನದಂದು ಬಂದು ನೋಡಿ !!!

ದಯವಿಟ್ಟು ನಿಮ್ಮ ಸ್ನೇಹಿತರಿಗೂ ಕಳಿಸಿ...

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ವಿಜಯ್ ರಾಜ್ ಕನ್ನಂತ್ - ೯೭೩೯೦೯೯೪೩೨ [9739099432]

*Click on image to read the invitation

Monday, June 2, 2008

ಪ್ರಕಟಣೆ-೧೭

ಆತ್ಮೀಯರೆ,
ಸೃಜನಶೀಲತೆಯ ಹುಡುಕಾಟದಲ್ಲಿ ತಿಂಗಳ ಪತ್ರಿಕೆ 'ಚೈತ್ರರಶ್ಮಿ'ಯ ಭಾವಯಾನಕ್ಕೆ ನಾಲ್ಕು ವರ್ಷ ತುಂಬಿದ ಸಂಭ್ರಮ. ಸಾಹಿತ್ಯ, ಸಂಸ್ಕೃತಿ,ಸೃಜನಶೀಲತೆ,ದೇಶಭಕ್ತಿ ಮುಂತಾದ ಸದ್ವಿಚಾರಗಳ ಚಿಂತನ-ಮಂಥನ ಆಶಯದೊಂದಿಗೆ, ಅವಕಾಶವಂಚಿತ ಗ್ರಾಮೀಣ ಪ್ರತಿಭಾವಂತರಿಗೆ ವೇದಿಕೆಯಾಗುವ ಕನಸಿನೊಂದಿಗೆ 'ಚೈತ್ರರಶ್ಮಿ' ಕ್ರಿಯಾಶೀಲವಾಗಿ ಮುನ್ನಡೆದಿದೆ.

'ಚೈತ್ರರಶ್ಮಿ' ಪತ್ರಿಕೆಗೆ ನಾಲ್ಕು ತುಂಬುವ ಈ ಸಂಭ್ರಮದ ಕ್ಷಣಗಳಲ್ಲಿ ನಾವೆಲ್ಲಾ ಒಂದೆಡೆ ಸೇರಬೇಕು ಎಂಬ ಬಯಕೆ ನಮ್ಮೆಲ್ಲರದು.

ಬರುವ ಜೂನ್ ೮ ರ ಭಾನುವಾರ ಸಂಜೆ ಬೆಂಗಳೂರಿನ ಜೆ.ಸಿ.ರಸ್ತೆಯ 'ನಯನ ಸಭಾಂಗಣ'ದಲ್ಲಿ ಕಾರ್ಯಕ್ರಮವಿದೆ. ಅಲ್ಲಿ 'ವಾರ್ಷಿಕ ಸಂಚಿಕೆಯ ಬಿಡುಗಡೆ'ಯ ಜೊತೆಗೆ ಚೈತ್ರರಶ್ಮಿಯ ವೆಬ್ ಸೈಟ್ ಅನಾವರಣ ಹಾಗೂ ಯಾವುದೇ ಪ್ರಚಾರವಿಲ್ಲದೆ ನಿಸ್ವಾರ್ಥವಾಗಿ ಸಮಾಜದ ಕೆಲಸ ಮಾಡುತ್ತಿರುವ ನಾಲ್ವರು ಮಹನೀಯರು ಮತ್ತು ನಾಲ್ಕು ಸಂಘಟನೆಗಳಿಗೆ ಚೈತ್ರರಶ್ಮಿಯ ಗೌರವ ಸಮರ್ಪಣೆ. ಜತೆಗೊಂದಿಷ್ಟು ಮನತಣಿಸುವ ಕಾರ್ಯಕ್ರಮ.

ಚೈತ್ರರಶ್ಮಿಯ ನಾಲ್ಕನೇ ವರ್ಷಸಂಭ್ರಮಕ್ಕೆ ಸಾಕ್ಷಿಯಾಗಲು ನೀವು ನಮ್ಮ ಜತೆಗಿರಬೇಕು ಎಂಬುದು ನಮ್ಮೆಲ್ಲರ ಕೋರಿಕೆ,ಆರಿಕೆ,ಹಾರೈಕೆ.

ದಿನಾಂಕ: ೮ ನೇ ಜೂನ್ ಭಾನುವಾರ
ಸಮಯ: ಸಂಜೆ ೪.೩೦ ಕ್ಕೆ
ಸ್ಥಳ: ನಯನ ಸಭಾಂಗಣ,
'ಕನ್ನಡ ಭವನ' (ರವೀಂದ್ರ ಕಲಾಕ್ಷೇತ್ರದ ಪಕ್ಕ)
ಜೆ.ದಿ ರಸ್ತೆ. ಬೆಂಗಳೂರು.

ನಮ್ಮೊಂದಿಗೆ:
ಶ್ರೀ ವಸುಧೇಂದ್ರ (ಖ್ಯಾತ ಕನ್ನಡ ಕಥೆಗಾರರು)
ಶ್ರೀ ಚಕ್ರವರ್ತಿ ಸೂಲಿಬೆಲೆ (ಬರಹಗಾರರು ಮತ್ತು ಅಂಕಣಕಾರರು)
ಶ್ರೀ ಎಂ.ಜಿ.ಅರುಣ(ಪ್ರಕಾಶಕರು 'ಸಾಹಿತ್ಯ ಭಂಡಾರ')

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಶ್ರೀ ರಾಮಚಂದ್ರ ಹೆಗಡೆ (ಸಂಪಾದಕರು 'ಚೈತ್ರ ರಶ್ಮಿ')
ಮೊಬೈಲ್:೯೯೮೬೩೭೨೫೦೩(9986372503)

*Click on image to read the invitation

Sunday, June 1, 2008

ಪ್ರಕಟಣೆ-೧೬

ನಮಸ್ಕಾರ , ನಿಮಗೊಂದು ಆಹ್ವಾನ ಪತ್ರಿಕೆ..

ಕನ್ನಡಸಾಹಿತ್ಯ.ಕಾಂ ತನ್ನ ಎಂಟನೇ ವಾರ್ಷಿಕೊತ್ಸವದ ಅಂಗವಾಗಿ ಜೂನ್ ಎಂಟರಂದು ಕ್ರೈಸ್ಟ್ ಕಾಲೇಜಿನಲ್ಲಿ ಒಂದು ದಿನದ ವಿಚಾರ ಸಂಕಿರಣವನ್ನು ಏರ್ಪಡಿಸುತ್ತಿದೆ.
ವಿಷಯ:
ಅಂತರ್ಜಾಲದ ಸಂಧರ್ಭದಲ್ಲಿ, ಪ್ರಾದೇಶಿಕ ಭಾಷೆಯಲ್ಲಿ ಸೃಜನಶೀಲತೆ: ಗತಿಸ್ಥಿತಿ ಸವಾಲು.

ಕಾರ್ಯಕ್ರಮಕ್ಕೆ ಸೀಮಿತ ಆಸನಗಳು ಲಭ್ಯವಿರುವ ಕಾರಣ ಭಾಗವಹಿಸಲು ಆಸಕ್ತಿ ಇರುವವರು ದಯಮಾಡಿ ಮುಂಚಿತವಾಗಿ ಕೆಳಗೆ ಕೊಟ್ಟಿರುವ ಲಿಂಕ್‍ನಲ್ಲಿ ರಿಜಿಸ್ಟರ್ ಮಾಡಿಕೊಳ್ಳಿ.

http://saadhaara.com/events/index/english
http://saadhaara.com/events/index/kannada

ಸಮಾರಂಭದಲ್ಲಿ ಭಾಗವಹಿಸಲು ನೋಂದಾವಣೆ ಕಡ್ಡಾಯ.

ಉತ್ಸಾಹ ಮತ್ತು ಸಮಯ ಇದ್ದರೆ ವಿಚಾರಸಂಕಿರಣದ ನಂತರ ಅನೌಪಚಾರಿಕವಾಗಿ ಬ್ಲಾಗಿಗಳಿಗೆ 'ಬ್ಲಾಗೀ ಮಾತುಕತೆ' ನಡೆಸುವ ಉದ್ದೇಶವೂ ಇದೆ.

ದಿನಾಂಕ: ೮ ನೇ ಜೂನ್ ೨೦೦೮ , ರವಿವಾರ
ಸ್ಥಳ: ಕ್ರೈಸ್ಟ್ ಕಾಲೇಜು,
ಬೆಂಗಳೂರು ಡೇರಿ ಹತ್ತಿರ. ಬೆಂಗಳೂರು.

ನೀವೂ ಬನ್ನಿ ಮತ್ತು ಆಸಕ್ತಿಯಿರುವ ನಿಮ್ಮ ಗೆಳೆಯರನ್ನು ಕರೆತನ್ನಿ.

-ಕನ್ನಡಸಾಹಿತ್ಯ.ಕಾಂ ಬಳಗ

Tuesday, May 20, 2008

ಪ್ರಕಟಣೆ-೧೫ಸಪ್ನ ಬುಕ್ ಹೌಸ್

ಪುಸ್ತಕ ಬಿಡುಗಡೆ ಸಮಾರಂಭ

ಡಾ. ಸುಮತೀಂದ್ರ ನಾಡಿಗ್ ಅವರ
> ಐದನೇಯ ಸಾಹಿತ್ಯ ಚರಿತ್ರೆ

ಡಾ.ಜಿ.ಬಿ.ಹರೀಶ್ ಅವರ
> ಆಕಾಶಕ್ಕೆ ಆಶ್ಚರ್ಯ

ಅಧ್ಯಕ್ಷತೆ:ಶ್ರೀ ವಿಶ್ವೇಶ್ವರ ಭಟ್

ಪುಸ್ತಕ ಬಿಡುಗಡೆ ಮತ್ತು ಪರಿಚಯ:
ಪ್ರೊ. ಜಿ.ಎಸ್.ಸಿದ್ಧಲಿಂಗಯ್ಯ

ಪ್ರೊ.ಸಿ.ಎನ್.ರಾಮಚಂದ್ರನ್

ದಿನಾಂಕ: ೨೪ ನೇ ಮೇ ೨೦೦೮ ಶನಿವಾರ
ಸಮಯ: ಸಂಜೆ ೫ ಗಂಟೆಗೆ
ಸ್ಥಳ: ಸುರಾನಾ ಕಾಲೇಜ್ ಸಭಾಂಗಣ,
ಸೌತ್ ಎಂಡ್ ವೃತ್ತ
ಜಯನಗರ. ಬೆಂಗಳೂರು-೧೧

Friday, May 2, 2008

ಪ್ರಕಟಣೆ-೧೪
ಮಂಥನ ಜಯನಗರ
ನಿಮ್ಮನ್ನು ಸ್ವಾಗತಿಸುತ್ತಿದೆ...

ಉಪನ್ಯಾಸ ಕಾರ್ಯಕ್ರಮ
ವಿಷಯ: ಪ್ರಸಕ್ತ ಚುನಾವಣೆ,ಮತದಾರನ ಮುಂದಿರುವ ಆಯ್ಕೆಗಳು - ಒಂದು ಚರ್ಚೆ

ಅತಿಥಿಗಳು:
ಡಾ. ಆರ್.ಎಲ್.ಎಂ.ಪಾಟೀಲ್, ನಿವೃತ್ತ ಪ್ರಾಧ್ಯಾಪಕರು ಬೆಂ.ವಿ.ವಿ.
ಶ್ರೀ ದೊರೈರಾಜು.ಎಸ್, ಮಾಜಿ ರಾಜ್ಯ ಪಬ್ಲಿಕ್ ಪ್ರಾಸಿಕ್ಯೂಟರ್
ಸುಧೀಂದ್ರ ಕಂಚಿತೋಟಿ,ಪತ್ರಕರ್ತರು ಬೆಂಗಳೂರು

ದಿನಾಂಕ: ೪ ನೇ ಮೇ ೨೦೦೮, ಭಾನುವಾರ
ಸಮಯ: ಬೆಳಿಗ್ಗೆ ೧೦.೩೦ ಕ್ಕೆ
ಸ್ಥಳ: ಗೋಖಲೆ ಸಭಾಂಗಣ. ಎನ್.ಆರ್. ಕಾಲೋನಿ. ಬೆಂಗಳೂರು-೧೧

*Click on image to read the invitation

Saturday, April 26, 2008

ಪ್ರಕಟಣೆ ೧೩

ಅಂಕಿತ ಪುಸ್ತಕ: ಇಂಡಿಯನ್ ಇನ್ಸ್ಟಿತ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ. ಪಿ. ವಾಡಿಯಾ ರಸ್ತೆ, ಬಸವನಗುಡಿ.
ಎಚ್. ಡುಂಡಿರಾಜ್ ಅವರ 'ಬಾರಯ್ಯ ಲಂಬೋದರ' ಪುಸ್ತಕ ಬಿಡುಗಡೆ - ಪತ್ರಕರ್ತ ವಿಶ್ವೇಶ್ವರ ಭಟ್ ಅವರಿಂದ. ಅತಿಥಿ - ಹಾಸ್ಯ ಸಾಹಿತಿ ಎಂ. ಎಸ್. ನರಸಿಂಹಮೂರ್ತಿ. ಅಧ್ಯಕ್ಷತೆ - ಸಂಶೋಧಕ ಶ್ರೀನಿವಾಸ್ ಹಾವನೂರು. ಬೆಳಿಗ್ಗೆ ೧೦.೩೦ ಕ್ಕೆ.

Thursday, April 24, 2008

ಪ್ರಕಟನೆ ೧೨

ಜನಾದೇಶ ಸಂಸ್ಥೆ : ಸಭಾಂಗಣ ಗಾಂಧೀ ಭವನ, ಕುಮಾರ ಕೃಪಾ ರಸ್ತೆ.
"ಪ್ರಜಾಪ್ರಭುತ್ವ, ಚುನಾವಣೆಗಳು ಮತ್ತು ಪ್ರಜ್ಜ್ಞ್ಯಾವಂತರ ಪಾತ್ರ" ಕುರಿತು ಚರ್ಚೆ.
ಪಾಲ್ಗೊಳ್ಳುವವರು - ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್ ವೆಂಕಟಾಚಲ, ಸಾಹಿತಿ ಪ್ರೊ. ಸಾ. ಶಿ. ಮರುಳಯ್ಯ, ಪ್ರೊ ಕೆ. ವಿ. ರಾಜು, ಕಿರುತೆರೆ ನಿರ್ದೇಶಕ ಟಿ. ಎನ್. ಸೀತಾರಾಂ, ಹಿರಿಯ ವಕೀಲ ಸಿ. ಎಚ್. ಹನುಮಂತರಾಯ ಮತ್ತಿತರರು.

ವೇಳೆ : ಸಂಜೆ ೬ ಕ್ಕೆ.

Tuesday, April 22, 2008

ಪ್ರಕಟಣೆ-೧೧

ನಟಸಾರ್ವಭೌಮ ಪದ್ಮಭೂಷಣ ದಾದಾಸಾಹೇಬ ಫಾಲ್ಕೆ ಪುರಸ್ಕೃತ ಡಾ.ರಾಜ್ ರವರ ೮೦ ನೇ ಹುಟ್ಟುಹಬ್ಬದ ನಿಮಿತ್ತ ಸ್ಟಾನ್ ಫೋರ್ಡ ರೇಡಿಯೋ ೯೦.೧ FM KZSU ಕನ್ನಡ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಹಾಗೆಯೇ ಕನ್ನಡ ಹೊಸ ವರ್ಷ ಸರ್ವಧಾರಿ ಸಂವತ್ಸರವನ್ನು ಸ್ವಾಗತಿಸಲು ನಮ್ಮೊಂದಿಗೆ ಸೇರಿಕೊಳ್ಳಿ.
ಕೇಳುಗರು ತಮ್ಮ ಅನಿಸಿಕೆಗಳನ್ನು ಕಾರ್ಯಕ್ರಮದಲ್ಲಿ ಹಂಚಿಕೊಳ್ಳಬಹುದು.

ದಿನಾಂಕ: ೨೩ ನೇ ಏಪ್ರಿಲ್ ೨೦೦೮ ಬುಧವಾರ
ಸಮಯ: ಮುಂಜಾನೆ ೭.೩೦ ರಿಂದ ೮.೩೦ ರವರೆಗೆ [PST]
ಸಂಜೆ ೮ ರಿಂದ ೯ ರವರೆಗೆ [IST]
ಸಂಚಾಲಕರು: ಮಧು ಕೃಷ್ಣಮೂರ್ತಿ

ಇಂಟರನೆಟ್ಟಿನಲ್ಲೂ ಈ ಕಾರ್ಯಕ್ರಮವನ್ನು ಕೇಳಿಸಿಕೊಳ್ಳಬಹುದು
http://www.itsdiff.comRadio [in SF Bay area]

ಹಳೆಯ ಕಂತುಗಳನ್ನು ಕೇಳಲು ಭೇಟಿ ನೀಡಿ
http://www.itsdiff.com/Kannada.html

Sunday, April 20, 2008

ಪ್ರಕಟಣೆ-೧೦

ರಂಗಚೇತನರವರಿಂದ

'ಸಿಜಿಕೆ ಕನಸಿನ ಜನಪರ ಸಂಸ್ಕೃತಿ ಉತ್ಸವ'ಕ್ಕೆ ಆಹ್ವಾನ.

ನಿರಂತರವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಜನಪದ ಮೇಳ ಹಾಗೂ ನಾಟಕೋತ್ಸವ.

ಉದ್ಘಾಟನೆ: ಡಾ. ವಿಜಯಾ
ಅಧ್ಯಕ್ಷತೆ: ಮನು ಬಳಿಗಾರ್
ಅತಿಥಿಗಳು: ಸಿ.ಜಿ.ಶ್ರೀನಿವಾಸನ್ ಮತ್ತು ಕೆ.ಎಚ್.ಪುಟ್ಟಸ್ವಾಮಿಗೌಡ
ದಿನಾಂಕ: ೨೧/೦೪/೨೦೦೮ ಸೋಮವಾರ
ಸಮಯ: ಸಂಜೆ ೬ ಕ್ಕೆ
ಸ್ಥಳ: ರವೀಂದ್ರ ಕಲಾಕ್ಷೇತ್ರ . ಜೆ.ಸಿ. ರಸ್ತೆ. ಬೆಂಗಳೂರು.

ನಂತರ ಸಂಜೆ ೭ ಕ್ಕೆ ಕೇಶವರೆಡ್ಡಿ ಹಂದ್ರಾಳರ ಸಣ್ಣ ಕತೆ 'ಜೇನು ಹುಡುಗಿ' ನಾಟಕ ಪ್ರದರ್ಶನವೂ ಇದೆ.

೨೨/೦೪/೨೦೦೮ ಮಂಗಳವಾರ ಸಂಜೆ ೭ ಕ್ಕೆ
ರಂಗನಿರಂತರ ತಂಡದಿಂದ ಲಕ್ಷ್ಮಿಪತಿ ಕೋಲಾರ ಅವರ 'ಅಲ್ಲಮನ ಬಯಲಾಟ'
ನಿರ್ದೇಶನ: ಡಾ. ಕೆ ರಾಮಕೃಷ್ಣಯ್ಯ

೨೩/೦೪/೨೦೦೮ ಬುಧವಾರ ಸಂಜೆ ೭ ಕ್ಕೆ
ಸಾಣೇಹಳ್ಳಿ ಶಿವಸಂಚಾರ ತಂಡದವರಿಂದ ನಿಸರ್ಗ ಪ್ರೀಯ ಅವರ 'ನಿಜಗುಣ ಶಿವಯೋಗಿ'
ನಿರ್ದೇಶನ: ನಟರಾಜ ಹೊನ್ನವಳ್ಳಿ

೨೪/೦೪/೨೦೦೮ ಗುರುವಾರ
ಕವಿಗೋಷ್ಠಿ ಹಾಗೂ 'ನಮ್ಮೆಲ್ಲರ ಬುಧ್ಧ' ನಾಟಕ

೨೫/೦೪/೨೦೦೮ ಶುಕ್ರವಾರ
'ಅಲ್ಲಮ' ನಾಟಕ

೨೬/೦೪/೨೦೦೮ ಶನಿವಾರ
ಜಾನಪದ ಮೇಳ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ

ಮೇಲಿನ ಎಲ್ಲ ಕಾರ್ಯಕ್ರಮಗಳು ನಡೆಯುವ ಸ್ಥಳ:ರವೀಂದ್ರ ಕಲಾಕ್ಷೇತ್ರ . ಜೆ.ಸಿ. ರಸ್ತೆ. ಬೆಂಗಳೂರು.

Tuesday, April 15, 2008

ಪ್ರಕಟಣೆ-೯
೮/೧೫

ಅಂದ್ರೆ ಆಗಷ್ಟ ೧೫
ಅಂದ್ರೆ ನಮ್ಮ ಸ್ವಾತಂತ್ರ್ಯದ ದಿನ

ಎಲ್ಲೋ ಓದಿದ್ದ ನೆನಪು. ಮೂರನೇ ಮಹಾಯುಧ್ಧವಾದರೆ ಅದು ಧರ್ಮಗಳ ನಡುವೆ ಎಂದು. ಹಾಗೆಯೇ ನಾಲ್ಕನೇ ಮಹಾಯುಧ್ಧದ ರೀತಿ ಹೇಗಿರುತ್ತೆ ಎಂದು ಕೇಳಿದ್ದಕೆ ಅದು ಕಲ್ಲು-ಗುರಾಣಿಗಳಿಂದ ಅಂತ ನಗೆಯಾಡಿ ಬರೆದಿದ್ದರು.

ಇಂದು ಜಗತ್ತನ್ನು ಬಹುಮುಖ್ಯವಾಗಿ ಕಾಡುತ್ತಿರುವ ಮತೀಯವಾದ/ಧರ್ಮಾಂಧತೆ ಕುರಿತು ವಿಚಾರಕ್ಕೊಳಪಡಿಸುವ ನಾಟಕ ೮/೧೫ ಋತ್ವಿಕ್ ಸಿಂಹರ ನಿರ್ದೇಶನದಲ್ಲಿ ೧೬-೦೪-೨೦೦೮ ರಿಂದ ೨೦-೦೪-೨೦೦೮ ರವರೆಗೆ ರಂಗಶಂಕರದಲ್ಲಿ ನಡೆಯುತ್ತಿದೆ.

ಇದು ಚರ್ಚೆಯಂಥದ್ದಲ್ಲ, ಉಪನ್ಯಾಸವೂ ಅಲ್ಲ.
ಇಲ್ಲಿ ಪ್ರೇಕ್ಷಕನೇ ಪಾತ್ರವಾಗುತ್ತಾನೆ. ಇದೊಂದು ಮತೀಯತೆಯ ಆರ್ಚಕರ ಮತ್ತು ಅನುಭವಿಸುವವರ ನಡುವಿನ ಸಂಭಾಷಣೆ. ದ್ವೇಷದ ಜ್ವಾಲೆಗಳು ಹೂಡುವ ಕತ್ತಲೆಗಳಲ್ಲಿ ಶಾಂತಿಯ ಬೆಳಕನ್ನು ಚೆಲ್ಲುವ ಆಶಾಕಿರಣ.

ನಾಟಕದ ಕಥೆ ಹೀಗಿದೆ:
ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಷನ್ಸ್ [ICCR] ಭಾರತದ ಸ್ವಾತಂತ್ರ್ಯೋತ್ಸವದ ದಿನ 'ಸೂಫಿ ಸಂಜೆ' ಎಂಬ ಕಾರ್ಯಕ್ರಮ ನಡೆಯುತಿರುತ್ತೆ. ಪಾಕಿಸ್ತಾನದ ಸಾಂಸ್ಕೃತಿಕ ಮಂತ್ರಿ ಭಾರತಕ್ಕೆ ಆಗಮಿಸಿರುತ್ತಾರೆ. ಆ ಸಾಂಸ್ಕೃತಿಕ ಸಂಜೆಯನ್ನು ಉಗ್ರವಾದಿಗಳು ಆಕ್ರಮಿಸುತ್ತಾರೆ. ನಾಟಕದ ಪ್ರೇಕ್ಷಕರೇ ಸೂಫಿ ಸಂಜೆಯ ಪ್ರೇಕ್ಷಕರಾಗಿರುತ್ತಾರೆ. ಆ ಸೂಫಿ ಕಾರ್ಯಕ್ರಮವನ್ನು ಹೈ-ಜಾಕ್ ಮಾಡಿದಾಗ ಅಲ್ಲಿ ಪ್ರೇಕ್ಷಕನೇ ಬಂಧಿಯಾಗಿರುತ್ತಾನೆ.

ಇಂತಹ ಒಂದು ಕ್ರಿಯಾತ್ಮಕ ನಾಟಕಕ್ಕೆ ರಂಗಶ ಶಂಕರ ಮತ್ತು ವೇದಿಕೆ ಫೌಂಡೆಶನ್ ಆಹ್ವಾನಿಸುತ್ತದೆ.

ನಾಟಕ: ೮/೧೫
ನಿರ್ದೇಶನ: ಋತ್ವಿಕ್ ಸಿಂಹ
ಸ್ಥಳ: ರಂಗಶಂಕರ. ೩೬/೨, ೮ನೇ ಅಡ್ಡರಸ್ತೆ. ಜೆ.ಪಿ.ನಗರ - ೨ ನೇ ಹಂತ
ಆಟಗಳು:
೧೬/೦೪/೨೦೦೮ ರಿಂದ ೧೯/೦೪/೨೦೦೮ ರ ವರೆಗೆ ಸಂಜೆ ೭.೩೦ ಕ್ಕೆ
೨೦/೦೪/೨೦೦೮ ರವಿವಾರ ರಂದು ಎರಡು ಆಟಗಳು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
೦೮೦-೨೬೭೨೪೩೭೩ [080-2672 4373]
೯೮೪೫೮೦೫೪೪೨ [98458 05442]

ಪ್ರಕಟಣೆ-೮

ಗೆಜ್ಜೆಹೆಜ್ಜೆಗೆ ೨೫ ತುಂಬುತ್ತಿರುವ ಸಂಭ್ರಮದಲ್ಲಿ ಮೈಸೂರು ರಮಾನಂದ ಅವರ ರಂಗಕೃತಿ "ಕಾಣೆಯಾಗಿದ್ದಾನೆ" ಲೋಕಾರ್ಪಣೆ ಮತ್ತು ಪ್ರದರ್ಶನ ಕಾರ್ಯಕ್ರಮವನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ಏರ್ಪಡಿಸಲಾಗಿದೆ.

ಪುಸ್ತಕ ಪ್ರೇಮಿಗಳಿಗೆ ಮತ್ತು ರಂಗಪ್ರೇಮಿಗಳಿಗೆ ಪ್ರೀತಿಯ ಆಹ್ವಾನವಿದೆ.

ಕೃತಿ: ಕಾಣೆಯಾಗಿದ್ದಾನೆ
ಉದ್ಘಾಟನೆ: ಎ.ವಿ ನಾಗರಾಜು
ಕೃತಿ ಬಿಡುಗಡೆ: ಡಿಂಗ್ರಿ ನಾಗರಾಜ್
ಕೃತಿ ಪರಿಚಯ: ಪ್ರೋ| ರವೀಂದ್ರ ಕೊಪ್ಪರ್
ಅಧ್ಯಕ್ಷತೆ: ವಿ.ರಾಮಮೂರ್ತಿ

ದಿನಾಂಕ: ೧೫/೦೪/೨೦೦೮ ಮಂಗಳವಾರ
ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ. ಬೆಂಗಳೂರು
ಸಮಯ: ಸಂಜೆ ೬.೩೦ ಕ್ಕೆ

Monday, April 14, 2008

ಪ್ರಕಟಣೆ-೭

ಸಂಗೀತ ಆರಾಧಕರೆ,

ಬಸವನಗುಡಿಯ ಇಂಡಿಯನ್ ಇನ್ಸ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ ನಲ್ಲಿ ಸುಗಮ ಸಂಗೀತ ಗಾಯನ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

ಗಾಯಕರು: ಪೂಜಾ ಎಂ.ಟಿ
ದಿನಾಂಕ: ೧೫/೦೪/೨೦೦೮
ಸಮಯ: ಸಂಜೆ ೬ ಗಂಟೆ
ಸ್ಥಳ: ಇಂಡಿಯನ್ ಇನ್ಸ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ
ವಾಡಿಯಾ ರಸ್ತೆ
ಬಸವನಗುಡಿ, ಬೆಂಗಳೂರು.

Thursday, April 10, 2008

ಪ್ರಕಟಣೆ-೬ಮಿತ್ರರೆ,

ಮಂಥನ ಜಯನಗರ - ಚಿಂತಕ ಲೇಖಕರ ವೇದಿಕೆ ಇದೇ ಭಾನುವಾರ ಉಪನ್ಯಾಸ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದೆ.

ವಿಷಯ: ಆಧುನಿಕ ಭಾರತದ ವೈಜ್ಞಾನಿಕ ಸಾಧನೆಗಳು

ಉಪನ್ಯಾಸಕರು: ಶ್ರೀ ಹಾಲ್ದೊಡ್ಡೇರಿ ಸುಧೀಂದ್ರ
ಲೇಖಕರು, ಅಂಕಣಕಾರರು ಹಾಗೂ ಉಪ ಮಹಾ ವ್ಯವಸ್ಥಾಪಕರು
ಹಿಂದೂಸ್ತಾನ್ ವಿಮಾನ ಕಾರ್ಖಾನೆ

ದಿನಾಂಕ: ೧೩ ಏಪ್ರಿಲ್ ೨೦೦೮ ಭಾನುವಾರ

ಸಮಯ: ಸಂಜೆ ೪.೩೦ ಗಂಟೆಗೆ

ಸ್ಥಳ: ರಾಷ್ಟ್ರೋತ್ಥಾನ ಶಾರೀರಿಕ ಶಿಕ್ಷಾಕೇಂದ್ರ
೧೦ ನೇ ಮುಖ್ಯ ರಸ್ತೆ, ಜಯನಗರ ೪ ನೇ ಬಡಾವಣೆ
ಬೆಂಗಳೂರು-೧೧

ತಮಗೆಲ್ಲರಿಗೂ ಆದರದ ಸ್ವಾಗತ

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಪ್ರಸನ್ನ: ೯೪೪೮೩ ೭೧೭೧೪ [94483 71714]
ಬದ್ರಿನಾರಾಯಣ: ೯೮೮೬೦ ೬೬೬೩೦ [98860 66630]
ನರೇಂದ್ರ ಕುಮಾರ್: ೯೩೪೨೫ ೩೬೫೫೧ [93425 36551]

*Click on image to read the invitation

Wednesday, April 9, 2008

ಪ್ರಕಟಣೆ-೫ಮಾನ್ಯರೆ,
ನಮಸ್ಕಾರಗಳು. ಛಂದ ಪುಸ್ತಕ ತನ್ನ ೩ ಹೊಸ ಪುಸ್ತಕಗಳನ್ನು ನಿಮಗೆ ಕೊಡಲು ಖುಶಿಯಿಂದ ತಯಾರಾಗಿದೆ. ಪ್ರತಿ ವರ್ಷದಂತೆ ಈ ಸಲವೂ ಹೊಸ ಲೇಖಕರ ೩ ಕೃತಿಗಳನ್ನು ಛಂದದಿಂದ ಪ್ರಕಟಿಸುತ್ತಿದ್ದೇವೆ.


ಊರ ಒಳಗಣ ಬಯಲು ಡಾ. ವಿನಯಾ (೨೦೦೭ನೇ ಸಾಲಿನ ಛಂದ ಪುಸ್ತಕ ಬಹುಮಾನ ಪಡೆದ ಕಥಾಸಂಕಲನ)

ರಾಗಿಮುದ್ದೆ ರಘುನಾಥ ಚ ಹ (ಲಲಿತ ಪ್ರಬಂಧಗಳ ಸಂಕಲನ)

ಮದ್ಯಸಾರ ಅಪಾರ (ನೈಂಟಿ ಹನಿಗಳು)


ಈ ೩ ಪುಸ್ತಕಗಳನ್ನು ಇದೇ ೧೩ ರಂದು, ಭಾನುವಾರ ಬೆಳಿಗ್ಗೆ ೧೦:೩೦ ಕ್ಕೆ ಇಂಡಿಯನ್ ಇನ್ಸ್‌ಸ್ಟಿಟ್ಯೂಟ್ ಆಫ್ ವರ್ಡ ಕಲ್ಚರ ನಲ್ಲಿ ಬಿಡುಗಡೆ ಮಾಡಲಿದ್ದೇವೆ.
ಮುಖಪುಟಗಳಿಗೆ ಇಲ್ಲಿ ಕ್ಲಿಕ್ಕಿಸಿ:http://www.raghuapara.blogspot.com/

ದಯವಿಟ್ಟು ಬನ್ನಿ.

ವಂದನೆಗಳು
--ವಸುಧೇಂದ್ರ

ದಿನ: ೧೩ ಎಪ್ರಿಲ್, ೨೦೦೮ ಭಾನುವಾರ
ಸಮಯ: ಬೆಳಿಗ್ಗೆ ೧೦:೩೦
ಸ್ಥಳ: ಇಂಡಿಯನ್ ಇನ್ಸ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ
ವಾಡಿಯಾ ರಸ್ತೆ
ಬಸವನಗುಡಿ . ಬೆಂಗಳೂರು

*Click on image to read the invitation

Monday, April 7, 2008

ಪ್ರಕಟಣೆ-೪

'ಶಿಶು ಸಾಹಿತ್ಯ' ಸ್ಪರ್ಧೆ

ಸದಾನಂದ ಸಾಂಸ್ಕೃತಿಕ ಪ್ರತಿಷ್ಠಾನ ಮುಂಬೈ ಹಾಗೂ ಕನ್ನಡ ವಿಭಾಗ, ಮುಂಬೈ ವಿಶ್ವವಿದ್ಯಾಲಯ ಇವರುಗಳು ಜಂಟಿಯಾಗಿ ಜಿ.ಪಿ ರಾಜರತ್ನಂ ಶಿಶು ಸಾಹಿತ್ಯ ಸ್ಪರ್ಧೆಯನ್ನು ಆಯೋಜಿಸಿದ್ದಾರೆ.

ಮಕ್ಕಳಿಗಾಗಿ ರಚಿತವಾದ ಕತೆ-ಕಾವ್ಯ-ನಾಟಕಗಳ ಹಸ್ತಪ್ರತಿಗಳನ್ನು ಆಹ್ವಾನಿಸಲಾಗಿದೆ. ಸ್ಪರ್ಧೆಗೆ ಕಳುಹಿಸುವ ಬರಹಗಳು ಇಲ್ಲಿಯವರೆಗೆ ಯಾವುದೇ ಬಹುಮಾನಕ್ಕೆ ಆಯ್ಕೆಯಾಗಿರಬಾರದು.

ಆಯ್ಕೆಯಾದ ಬರಹಕ್ಕೆ ೫ ಸಾವಿರ ರೂಪಾಯಿ ಬಹುಮಾನ ನೀಡಲಾಗುವದು. ಸಂಸ್ಥೆಯು ಪ್ರಶಸ್ತಿಗಳಿಸಿದ ಬರಹವನ್ನು ಪ್ರಕಟಿಸುವ ಹಕ್ಕನ್ನು ಪಡೆದಿರುತ್ತದೆ.

ಹಸ್ತಪ್ರತಿಯನ್ನು ಕಳುಹಿಸುವ ವಿಳಾಸ:
ಡಾ.ಗಣೇಶ್.ಎನ್.ಉಪಾಧ್ಯ.
ಮುಖ್ಯಸ್ಥರು,ಕನ್ನಡ ವಿಭಾಗ,
ಮುಂಬೈ ವಿಶ್ವವಿದ್ಯಾಲಯ,
ವಿದ್ಯಾನಗರಿ ಕ್ಯಾಂಪಸ್,ಕಳಿನಾ
ಮುಂಬೈ-೪೦೦೦೯೮

ಕೊನೆಯ ದಿನಾಂಕ: ಜೂನ್ ೧೫, ೨೦೦೮

ಪ್ರಕಟಣೆ-೩

ಪುಸ್ತಕ ಬಿಡುಗಡೆ
ಹಾಸ್ಯಸಾಹಿತಿ ಶ್ರೀ.ರಾಮನಾಥ್ ವಿರಚಿತ 'ತುಂಟ ತೇಜ ೧೦೮ ಹೇಳಿದ' ಪುಸ್ತಕ ಬಿಡುಗಡೆ ಕಾರ್ಯಕ್ರಮವು ಇಂದು ೦೮/೦೪/೨೦೦೮ ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಬೆಂಗಳೂರುನಲ್ಲಿ ಏರ್ಪಡಿಸಿದ್ದಾರೆ.
ಎಚ್. ದುಂಡಿರಾಜ್ ಈ ಪುಸ್ತಕವನ್ನು ಬಿಡುಗಡೆ ಮಾಡಲಿದ್ದಾರೆ.

ಸ್ಥಳ: ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್
ರಾಜೇಂದ್ರ ಸಭಾಂಗಣ
ಜೆ.ಎಸ್.ಎಸ್ ವಿದ್ಯಾ ಸಂಸ್ಥೆಗಳ ಸಮುಚ್ಚಯ
ಕನಕಪುರ ರಸ್ತೆ. ಬೆಂಗಳೂರು

ಸಮಯ: ಸಂಜೆ ೬ ಗಂಟೆ
ಅತಿಥಿಗಳು: ವೈ.ವಿ. ಗುಂಡೂರಾವ್, ದಿಬ್ಬೂರು ಸಿದ್ಧಲಿಂಗಪ್ಪ, ಡಾ.ಟಿ.ಎಸ್.ವಿಶ್ವನಾಥ್
ಅಧ್ಯಕ್ಷತೆ: ರಿಚರ್ಡ ಲೂಯಿಸ್

Saturday, April 5, 2008

ಪ್ರಕಟಣೆ-೨


ಬನವಾಸಿ ಬಳಗ

ಗೆಳೆಯರೇ,

ಕರ್ನಾಟಕದ ಮೂಲೆ ಮೂಲೆಗಳಲ್ಲಿ ಹಾಗೂ ವಿಶ್ವದ ಎಲ್ಲೆಡೆ ನೆಲೆಸಿರುವ ಎಲ್ಲ ಆತ್ಮೀಯ ಕನ್ನಡಿಗರೇ, ಇದೋ ಬಂದಿದೆ ನಾವೆಲ್ಲರೂ ಒಂದೆಡೆ ಸೇರುವ ಒಂದು ಸುವರ್ಣ ಅವಕಾಶ !!

ನೀವು ಒಪ್ತೀರೋ ಬಿಡ್ತೀರೋ, ನಮ್ಮ ಸಮಾಜ ನಮ್ಮನ್ನೆಲ್ಲಾ ಬುಧ್ಧಿವಂತರು ಅಂತ ನಮಗೆ ಗೌರವ ಆದರ ನೀಡಿದೆ. ಅದಕ್ಕೆ ಪ್ರತಿಯಾಗಿ ಕನ್ನಡ-ಕನ್ನಡಿಗ-ಕರ್ನಾಟಕಕ್ಕಾಗಿ ನಾವೇನು ಮಾಡಬಹುದು ಎಂಬ ಕುತೂಹಲ ನಿಮಗಿದೆಯೇ? ನಮಗೂ ಇದೆ...

ಹಾಂ.. ಏನಂದ್ರಿ? ಈಗಾಗಲೇ ನೀವು ಹಲವು ಕೆಲಸಗಳನ್ನು ಮಾಡ್ತಿದೀರಾ? ಸರಿ ಮತ್ತೆ. ಇನ್ಯಾಕೆ ತಡ? ಬನ್ನಿ ಎಲ್ಲರೂ ಸೇರಿ ಈ ಕನ್ನಡಿಗರ ಕೂಟದಲ್ಲಿ ಅವನ್ನು ಹಂಚಿಕೊಳ್ಳೋಣ. ಇನ್ನೂ ಫಲಕಾರಿ ಮಾಡೋಣ. ಈ ಮೂಲಕ, ಬನವಾಸಿ ಬಳಗದ ಪರವಾಗಿ ಈ ಕೂಟಕ್ಕೆ ನಿಮ್ಮೆಲ್ಲರನ್ನು ಸ್ವಾಗತಿಸುತ್ತಿದ್ದೇವೆ.

ಹಾಗೇ, ಈ ಮಾರ್ನಿಂಗ್ ಶೋ ಗೆ ನಿಮ್ಮ ಗೆಳೆಯರನ್ನೂ ಕರ್ಕೊಂಡು ಬನ್ನಿ

ದಿನ: ೧೩ ಎಪ್ರಿಲ್, ೨೦೦೮ ಭಾನುವಾರ
ಸಮಯ: ೧೧ ರಿಂದ ೧ ಗಂಟೆ
ಜಾಗ: ಮಿಥಿಕ್ ಸೋಸೈಟಿ, ಯವನಿಕಾ ಮುಂಭಾಗ,ನೃಪತುಂಗ ರಸ್ತೆ, ಬೆಂಗಳೂರು
ಹೆಚ್ಚಿನ ಮಾಹಿತಿಗಾಗಿ: banavasibalaga@gmail.com

*Click on image to read the invitation

Friday, April 4, 2008

ಪ್ರಕಟಣೆ-೧


ಪ್ರೀತಿಯ ಕನ್ನಡಿಗರೇ,

'ಗುರುಕುಲ ದರ್ಶನ' ಕಾರ್ಯಕ್ರಮಕ್ಕೆ ನಿಮಗೆಲ್ಲರಿಗೂ ಆತ್ಮೀಯ ಆಹ್ವಾನವಿದೆ ಪ್ರಬೋಧಿನಿ ಗುರುಕುಲವರಿಂದ*.

ವಿಷಯ: ಆಧುನಿಕ ಯುಗದಲ್ಲಿ ಭಾರತೀಯ ಶಿಕ್ಷಣದ ಮಹತ್ವ

ದಿನ: ೬ ಎಪ್ರಿಲ್, ೨೦೦೮ ಭಾನುವಾರ
ಸಮಯ: ಬೆಳಿಗ್ಗೆ ೯.೪೫ ರಿಂದ ಮಧ್ಯಾಹ್ನ ೧.೩೦ ರವರೆಗೆ
ಸ್ಥಳ: ಆರ್.ವಿ. ಟೀಚರ್ಸ್ ಕಾಲೇಜು ಸಭಾಂಗಣ.೨ನೇ ಬ್ಲಾಕ್ ಜಯನಗರ ಬೆಂಗಳೂರು

ಹೆಚ್ಚಿನ ಮಾಹಿತಿಗಾಗಿ:
ಪ್ರಬೋಧಿನಿ ಗುರುಕುಲ
ಹರಿಹರಪುರ, ಚಿಕ್ಕಮಗಳೂರು ಜಿಲ್ಲೆ
ದೂರವಾಣಿ: ೦೮೨೬೫-೨೭೪೨೩೨, ೯೪೪೮೦ ೦೭೦೦೫ , ೯೩೪೧೨ ೪೯೬೫೧
[08265-274232, 94480 07005, 93412 49651]

*Click on image to read the invitation

Thursday, April 3, 2008

ಆರಂಭಕ್ಕೆ...

"ಮೊನ್ನೆ ಎಲ್ಲೋ ಬ್ಲಾಗಿಗರ ಕೂಟ ಇತ್ತಂತೆ...... ಅದೆಲ್ಲೋ ಡಿ.ವಿ.ಜಿ ಯವರ ಹುಟ್ಟುಹಬ್ಬದ ಕಾರ್ಯಕ್ರಮ ಆಯಿತಂತೆ.... ಜೋಗಿಯವರ ಪುಸ್ತಕ ಬಿಡುಗಡೆಗೆ ನೀವು ಹೋಗಿದ್ರಾ? ಯಾವಾಗ ಎಲ್ಲಿ ನಡೆಯಿತು?..... ಮೈಸೂರ ಮಲ್ಲಿಗೆ ನಾಟಕ ನೋಡುವಾಸೆ ತುಂಬಾ ಇತ್ತು, ಆದ್ರೆ ಅದ್ಯಾವಾಗ ಪ್ರಸಾರ ಆಯ್ತೋ ಗೊತ್ತೇ ಆಗಲಿಲ್ಲ " ಹೀಗೆಯೇ ಇನ್ನೂ ಅನೇಕ ಅಯ್ಯೋಗಳ ಪಟ್ಟಿ ಬೆಳೆಯುತ್ತೆ. ಇಂತಹ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಾವು ನಮಗೆ ಗೊತ್ತಾಗದೇ ಹೋದುದಕ್ಕಾಗಿ ಕಳೆದುಕೊಂಡಿದ್ದೇವೆ.


ಈ ಕೊರಗನ್ನು ನೀಗಿಸಲು ಏನು ಮಾಡಬಹುದು ಎಂದು ತಲೆ ಕೆರೆದುಕೊಂಡಾಗ ಹೊಳೆದಿದ್ದೇ 'ಇದೊಂದು ಪ್ರಕಟಣೆ' ಎಂಬ ಬ್ಲಾಗ್.

www.prakatane.blogspot.com

ಬೆಂಗಳೂರಿನಲ್ಲೇ ಆಗಲಿ, ಕರ್ನಾಟಕದಲ್ಲೇ ಆಗಲಿ ಅಥವಾ ಪ್ರಪಂಚದ ಯಾವುದೇ ಮೂಲೆಯಲ್ಲೇ ಆಗಲಿ ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಮ್ಮ 'ಇದೊಂದು ಪ್ರಕಟಣೆ' ಬ್ಲಾಗಿಗೆ ಕಳಿಸಿ. ನಾವು ಪ್ರಕಟಿಸುತ್ತೇವೆ.


ನೀವು ಮಾಡಬೇಕಾದುದಿಷ್ಟೇ. ನಿಮಗೆ ಯಾವುದಾದರೂ ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮದ ಬಗ್ಗೆ ತಿಳಿದಿದೆಯೇ prakatane@gmail.com ಗೆ ಒಂದು ಮಿಂಚಂಚೆ ಕಳಿಸಿ.
ನಿಮಗೆ ಈ ವಾರದಲ್ಲಿ/ವಾರಾಂತ್ಯದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದ ಬಗ್ಗೆ ತಿಳಿಯಬೇಕೆ? 'ಇದೊಂದು ಪ್ರಕಟಣೆಗೆ' ಭೇಟಿ ಕೊಡಿ.


ಇದು ನಿಮ್ಮಿಂದ ನಿಮಗಾಗಿ ನಿಮಗೋಸ್ಕರ ಹುಟ್ಟಿದ ಬ್ಲಾಗ್. ಇದರ ಜವಾಬ್ದಾರಿಯೂ ನಿಮ್ಮೆಲ್ಲರದೇ. ಈ ಬ್ಲಾಗು ನಡೆಯುವುದನ್ನು ಕಲಿಯುವವರೆಗೆ ನಾನು ನೋಡಿಕೊಳ್ಳುತ್ತೇನೆ. ಆಮೇಲೆ ಯಾರಾದರೂ ಕೈ ಜೋಡಿಸಬಹುದು.

Disclaimer (ಮಿಸ್-ಕ್ಲೇಮರ್)

ಪ್ರಕಟಣೆಯನ್ನು ಕಳಿಸಿದವರಿಗೆ ಪತ್ರ ವ್ಯವಹಾರ ಮಾಡಿಯೇ ನಂತರ ಅವರ ಅನುಮತಿ ಪಡೆದುಕೊಂಡು ಪ್ರಕಟಿಸುತ್ತಿದ್ದೇನೆ. ಕೆಲವೊಂದು ಆಮಂತ್ರಣಗಳು ಖಾಸಗಿಯಾಗಿರಲೂ ಸಾಧ್ಯ. ಅಂತಹುಗಳಿಗೆ ಕರೆ ಮಾಡಿ ಖಾತ್ರಿ ಪಡೆದುಕೊಂಡೇ ಪ್ರಕಟಿಸುತ್ತಿದ್ದೇವೆ. ನಮ್ಮೆಲ್ಲರ ಪ್ರಯತ್ನದ ಮೇಲೆಯೂ ತಪ್ಪು ಘಟಿಸದಿರಲಿ ಎಂಬಂತೆ ಇದೊಂದು
Disclaimer:
"ಕೀಟಲೆ ಮಾಡೋರು, ಏಪ್ರಿಲ್ ಫೂಲ್ ಮಾಡೋರ ಬಗ್ಗೆ ನಾವು ಜವಾಬ್ದಾರರಲ್ಲ"