
೮/೧೫
ಅಂದ್ರೆ ಆಗಷ್ಟ ೧೫
ಅಂದ್ರೆ ನಮ್ಮ ಸ್ವಾತಂತ್ರ್ಯದ ದಿನ
ಎಲ್ಲೋ ಓದಿದ್ದ ನೆನಪು. ಮೂರನೇ ಮಹಾಯುಧ್ಧವಾದರೆ ಅದು ಧರ್ಮಗಳ ನಡುವೆ ಎಂದು. ಹಾಗೆಯೇ ನಾಲ್ಕನೇ ಮಹಾಯುಧ್ಧದ ರೀತಿ ಹೇಗಿರುತ್ತೆ ಎಂದು ಕೇಳಿದ್ದಕೆ ಅದು ಕಲ್ಲು-ಗುರಾಣಿಗಳಿಂದ ಅಂತ ನಗೆಯಾಡಿ ಬರೆದಿದ್ದರು.
ಇಂದು ಜಗತ್ತನ್ನು ಬಹುಮುಖ್ಯವಾಗಿ ಕಾಡುತ್ತಿರುವ ಮತೀಯವಾದ/ಧರ್ಮಾಂಧತೆ ಕುರಿತು ವಿಚಾರಕ್ಕೊಳಪಡಿಸುವ ನಾಟಕ ೮/೧೫ ಋತ್ವಿಕ್ ಸಿಂಹರ ನಿರ್ದೇಶನದಲ್ಲಿ ೧೬-೦೪-೨೦೦೮ ರಿಂದ ೨೦-೦೪-೨೦೦೮ ರವರೆಗೆ ರಂಗಶಂಕರದಲ್ಲಿ ನಡೆಯುತ್ತಿದೆ.
ಇದು ಚರ್ಚೆಯಂಥದ್ದಲ್ಲ, ಉಪನ್ಯಾಸವೂ ಅಲ್ಲ.
ಇಲ್ಲಿ ಪ್ರೇಕ್ಷಕನೇ ಪಾತ್ರವಾಗುತ್ತಾನೆ. ಇದೊಂದು ಮತೀಯತೆಯ ಆರ್ಚಕರ ಮತ್ತು ಅನುಭವಿಸುವವರ ನಡುವಿನ ಸಂಭಾಷಣೆ. ದ್ವೇಷದ ಜ್ವಾಲೆಗಳು ಹೂಡುವ ಕತ್ತಲೆಗಳಲ್ಲಿ ಶಾಂತಿಯ ಬೆಳಕನ್ನು ಚೆಲ್ಲುವ ಆಶಾಕಿರಣ.
ನಾಟಕದ ಕಥೆ ಹೀಗಿದೆ:
ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಷನ್ಸ್ [ICCR] ಭಾರತದ ಸ್ವಾತಂತ್ರ್ಯೋತ್ಸವದ ದಿನ 'ಸೂಫಿ ಸಂಜೆ' ಎಂಬ ಕಾರ್ಯಕ್ರಮ ನಡೆಯುತಿರುತ್ತೆ. ಪಾಕಿಸ್ತಾನದ ಸಾಂಸ್ಕೃತಿಕ ಮಂತ್ರಿ ಭಾರತಕ್ಕೆ ಆಗಮಿಸಿರುತ್ತಾರೆ. ಆ ಸಾಂಸ್ಕೃತಿಕ ಸಂಜೆಯನ್ನು ಉಗ್ರವಾದಿಗಳು ಆಕ್ರಮಿಸುತ್ತಾರೆ. ನಾಟಕದ ಪ್ರೇಕ್ಷಕರೇ ಸೂಫಿ ಸಂಜೆಯ ಪ್ರೇಕ್ಷಕರಾಗಿರುತ್ತಾರೆ. ಆ ಸೂಫಿ ಕಾರ್ಯಕ್ರಮವನ್ನು ಹೈ-ಜಾಕ್ ಮಾಡಿದಾಗ ಅಲ್ಲಿ ಪ್ರೇಕ್ಷಕನೇ ಬಂಧಿಯಾಗಿರುತ್ತಾನೆ.
ಇಂತಹ ಒಂದು ಕ್ರಿಯಾತ್ಮಕ ನಾಟಕಕ್ಕೆ ರಂಗಶ ಶಂಕರ ಮತ್ತು ವೇದಿಕೆ ಫೌಂಡೆಶನ್ ಆಹ್ವಾನಿಸುತ್ತದೆ.
ನಾಟಕ: ೮/೧೫
ನಿರ್ದೇಶನ: ಋತ್ವಿಕ್ ಸಿಂಹ
ಸ್ಥಳ: ರಂಗಶಂಕರ. ೩೬/೨, ೮ನೇ ಅಡ್ಡರಸ್ತೆ. ಜೆ.ಪಿ.ನಗರ - ೨ ನೇ ಹಂತ
ಆಟಗಳು:
೧೬/೦೪/೨೦೦೮ ರಿಂದ ೧೯/೦೪/೨೦೦೮ ರ ವರೆಗೆ ಸಂಜೆ ೭.೩೦ ಕ್ಕೆ
೨೦/೦೪/೨೦೦೮ ರವಿವಾರ ರಂದು ಎರಡು ಆಟಗಳು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
೦೮೦-೨೬೭೨೪೩೭೩ [080-2672 4373]
೯೮೪೫೮೦೫೪೪೨ [98458 05442]