Wednesday, July 16, 2008

ಪ್ರಕಟಣೆ - ೨೪




ಆತ್ಮೀಯ ಗೆಳೆಯ/ಗೆಳತಿಯರೇ,

ಅಕ್ಕರೆಯ ಅಕ್ಷರ ಬಂಧುಗಳೆ, ನಿಮಗೆಲ್ಲ ಆತ್ಮೀಯ ಸ್ವಾಗತ

ಎಲ್ಲಿಗೆ: ಸುಚಿತ್ರಾ ಫಿಲ್ಮ್ ಸೊಸೈಟಿ, ಬನಶಂಕರಿ ೨ನೇ ಹಂತ. ಬೆಂಗಳೂರು.
ಎಂದು: ಜುಲೈ ೨೭ ನೇ ತಾರೀಖು ೨೦೦೮, ಭಾನುವಾರ.
ಸಮಯ: ಬೆಳಿಗ್ಗೆ ೧೦ ಗಂಟೆಗೆ

ಎರಡು ಅಕ್ಷರನೌಕೆಗಳ ಅಭಿಯಾನದಾರಂಭ ಸಮಾರಂಭ

ಪುಸ್ತಕಗಳು:
೧. ತುಳಸಿವನ - ಲಘು ಪ್ರಬಂಧ ಸಂಕಲನ
ಲೇಖಕಿ : ತುಳಸಿಯಮ್ಮ ಖ್ಯಾತಿಯ ತ್ರಿವೇಣಿ ಶ್ರೀನಿವಾಸ್

೨. ಭಾವಬಿಂಬ - ಕವನ ಸಂಕಲನ
ಲೇಖಕಿ: ಸುಪ್ತದೀಪ್ತಿ ಕಾವ್ಯನಾಮದ ಜ್ಯೋತಿ ಮಹಾದೇವ

ಅತಿಥಿಗಳು:
೧. ಶ್ರೀ ದೊಡ್ಡರಂಗೇಗೌಡ (ಕವಿ, ಚಿತ್ರ ಸಾಹಿತಿ ಮತ್ತು ವಿಧಾನ್ ಪರಿಷತ್ ಸದಸ್ಯರು)
೨. ಶ್ರೀ ಡಾ|| ಹೆಚ್.ಎಸ್.ವೆಂಕಟೇಶಮೂರ್ತಿ (ಕವಿ)
೩. ಶ್ರೀ ಗಿರೀಶ್.ಹೆಚ್.ರಾವ್ (ಜೋಗಿ)

ಆಹ್ವಾನ ಪತ್ರಿಕೆಗಾಗಿ ಚಿತ್ರ ನೋಡಿ.

--ಸ್ನೇಹದಿಂದ,
ತ್ರಿವೇಣಿ

ಪ್ರಕಟಣೆ - ೨೩




ಸ್ನೇಹಿತರೆ,

ಎರಡು ವರ್ಷಗಳ ಹಿಂದೆ ಬಿಡುಗಡೆಯಾಗಿ ಜನರ ಮತ್ತು ವಿಮರ್ಶಕರ ಮೆಚ್ಚುಗೆ ಗಳಿಸಿದ 'ಮಠ' ಚಿತ್ರದ ಬಗ್ಗೆ ಬಹಿರಂಗ ಚರ್ಚೆಗಳೇನೂ ಆಗಲಿಲ್ಲ. ಮೊಟ್ಟ ಮೊದಲ ಬಾರಿಗೆ ಕಲಾತ್ಮಕ ಮತ್ತು ವಾಣಿಜ್ಯ ಚಿತ್ರಗಳ ಗುಣಾತ್ಮಕ ಅಂಶಗಳ Fly Over ಅಂತ ಅನಿಸಿಕೊಂಡಿದ್ದು ಮಠ ಚಿತ್ರದ ಹೆಗ್ಗಳಿಕೆ.

ಮೌಲಿಕ ಕೃತಿ ಅಥವಾ ಚಿತ್ರದ ಬಗ್ಗೆ ಚರ್ಚೆ-ಸಂವಾದಗಳೇ ಕಡಿಮೆಯಾಗಿರುವ ಈ ದಿನಗಳಲ್ಲಿ ಇಗೋ 'ಕನ್ನಡಸಾಹಿತ್ಯ.ಕಾಂ'ನ ಈ ಪ್ರಯತ್ನ ನಿಮಗಾಗಿ

'ಮಠ' ಚಿತ್ರ ಪ್ರದರ್ಶನ ಮತ್ತು ಸಂವಾದ

ಅವತ್ತು ನಿಮ್ಮೊಂದಿಗಿರುವವರು: ಮಠ ಚಿತ್ರದ ನಿರ್ದೇಶಕ ಗುರುಪ್ರಸಾದ, ಕಲಾವಿದರು, ತಂತ್ರಜ್ಞರು

ಪ್ರದರ್ಶನ ಎಲ್ಲಿ? ವಿಳಾಸ?

‘ಶ್ರೀಗಂಧ ಪ್ರಿವ್ಯೂ ಥಿಯೇಟರ್’ (ರೇಣುಕಾಂಬ)
ಲಾವಣ್ಯ ಟವರ್ಸ್
ನಂ ೫೯, ೪ ನೆ ಮುಖ್ಯ ರಸ್ತೆ,
೧೮ ನೆ ಆಡ್ಡರಸ್ತೆ
ಮಲ್ಲೇಶ್ವರಂ
ಬೆಂಗಳೂರು- ೫೬೦ ೦೫೫

ದಿನಾಂಕ: ೨೦ ನೇ ಜುಲೈ ೨೦೦೮ ರವಿವಾರ
ಸಮಯ : ಮಧ್ಯಾಹ್ನ ೧ ಗಂಟೆಗೆ

ಹೆಚ್ಚಿನ ವಿವರಗಳು ಮತ್ತು ನಿಮ್ಮ ಆಸನ ಕಾದಿರಿಸಲು ಸಂವಾದ.ಕಾಂ ನ 'ಮಠ' ವಿಶೇಷ ಪುಟಕ್ಕೆ ಭೇಟಿ ಕೊಡಿ.


ಕನ್ನಡಸಾಹಿತ್ಯ.ಕಾಂ ಬಳಗ

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
೯೯೦೦೪೩೯೯೩೦ (ರವಿ ಅರೇಹಳ್ಳಿ)
೯೯೦೧೩೯೯೬೭೧ (ರಾಘವ ಕೋಟೇಕರ್)
೯೭೩೧೭೫೫೯೬೬ (ಎಂ ಕಿರಣ್, ಬೆಂಬಲಿಗರ ಬಳಗದ ನಿರ್ವಾಹಕರು)

Tuesday, July 15, 2008

ಪ್ರಕಟಣೆ - ೨೨



ಮಾನ್ಯರೆ,

ನಿಮಗೆಲ್ಲರಿಗೂ ಟಿ.ಜಿ.ಶ್ರೀನಿಧಿಯವರಿಂದ ಒಂದು ಆತ್ಮೀಯ ಆಮಂತ್ರಣ.

ಯುವ ವಿಜ್ಞಾನ ಬರಹಗಾರ ಹಾಗೂ ಸಾಫ್ಟ್‌ವೇರ್ ತಂತ್ರಜ್ಞ ಟಿ.ಜಿ.ಶ್ರೀನಿಧಿಯವರ ಹೊಸ ಪುಸ್ತಕಗಳು - 'ವೆಬ್ ವಿಹಾರ' ಹಾಗೂ 'ಅವಕಾಶ ಅಪಾರ' - ಬರುವ ಜುಲೈ ೨೦ ರಂದು ಸಂಜೆ ಬೆಂಗಳೂರು ಬಸವನಗುಡಿಯ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನಲ್ಲಿ ಬಿಡುಗಡೆಯಾಗಲಿವೆ.

ಕಾರ್ಯಕ್ರಮದಲ್ಲಿ ಹಿರಿಯ ವಿಜ್ಞಾನ ಬರಹಗಾರರಾದ ಶ್ರೀ ನಾಗೇಶ ಹೆಗಡೆ, ಟಿ ಆರ್ ಅನಂತರಾಮು, ಕೊಳ್ಳೇಗಾಲ ಶರ್ಮ ಹಾಗೂ 'ವಿಶ್ವಕನ್ನಡ ಡಾಟ್ ಕಾಂ'ನ ಡಾ.ಯು.ಬಿ.ಪವನಜ ಉಪಸ್ಥಿತರಿರಲಿದ್ದಾರೆ.

ಹವ್ಯಾಸಿ ವಿಜ್ಞಾನ ಬರಹಗಾರರಾದ ಟಿ.ಜಿ.ಶ್ರೀನಿಧಿಯವರ ಮುನ್ನೂರಕ್ಕೂ ಹೆಚ್ಚು ಲೇಖನಗಳು ಹಾಗೂ ಎರಡು ಪುಸ್ತಕಗಳು ಈಗಾಗಲೇ ಪ್ರಕಟವಾಗಿವೆ. ಅವರು 'ಇ-ಜ್ಞಾನ' ಎಂಬ ವಿಜ್ಞಾನಕ್ಕೆ ಸಂಬಂಧಪಟ್ಟ ಕನ್ನಡ ಬ್ಲಾಗನ್ನೂ ನಡೆಸುತ್ತಿದ್ದಾರೆ.

ಬಿಡುಗಡೆಯಾಗುತ್ತಿರುವ ಹೊಸ ಪುಸ್ತಕಗಳ ಪರಿಚಯ ಹೀಗಿದೆ:

೧. ವೆಬ್ ವಿಹಾರ - ಅಂತರಜಾಲ ಲೋಕಕ್ಕೊಂದು ಬೆಳಕಿಂಡಿ
ಇದು ಅಂತರಜಾಲ (ಇಂಟರ್ ನೆಟ್) ಹಾಗೂ ವಿಶ್ವವ್ಯಾಪಿ ಜಾಲದ (WWW) ಸಂಕ್ಷಿಪ್ತ ಪರಿಚಯ ನೀಡಿ ಅದರ ಅನೇಕ ಸೌಲಭ್ಯಗಳನ್ನು ಬಳಸಲು ಓದುಗರಿಗೆ ನೆರವಾಗುವ ಪುಸ್ತಕ. ಮಾಹಿತಿ ಎಂದರೇನು ಎಂಬಲ್ಲಿಂದ ಪ್ರಾರಂಭಿಸಿ ಗಣಕ ಜಾಲಗಳು, ಅಂತರಜಾಲದ ಹುಟ್ಟು, ವಿಶ್ವವ್ಯಾಪಿ ಜಾಲ ಬೆಳೆದ ಬಗೆ, ಇಮೇಲ್, ಬ್ಲಾಗಿಂಗ್, ಇ-ಶಾಪಿಂಗ್, ಆನ್‌ಲೈನ್ ಬ್ಯಾಂಕಿಂಗ್,ಬ್ಲಾಗಿಂಗ್, ವಿಶ್ವವ್ಯಾಪಿ ಜಾಲವನ್ನು ಕಾಡುತ್ತಿರುವ ಸಮಸ್ಯೆಗಳು (ವೈರಸ್, ಫಿಷಿಂಗ್, ಮಾಲ್‌ವೇರ್, ಸ್ಪಾಮ್ ಇತ್ಯಾದಿ) ಮುಂತಾದ ಅನೇಕ ವಿಷಯಗಳನ್ನು ಇದು ವಿವರಿಸುತ್ತದೆ. ವಿಶ್ವವ್ಯಾಪಿ ಜಾಲದಲ್ಲಿ ಕನ್ನಡದ ಸ್ಥಿತಿಗತಿಗಳ ಬಗೆಗೂ ಬಹಳಷ್ಟು ಮಾಹಿತಿ ಇದೆ. ಅಂತರಜಾಲದಲ್ಲಿ ಕನ್ನಡದ ಬಳಕೆ ಬೆಳೆದುಬಂದ ಹಾದಿಯ ಹಿನ್ನೋಟದ ಜೊತೆಗೆ ಕನ್ನಡದ ಪ್ರಮುಖ ತಾಣಗಳ ಹಾಗೂ ಕುತೂಹಲಕರ ಬ್ಲಾಗುಗಳ ಪಟ್ಟಿ ಕೂಡ ಇದೆ. ಶ್ರೀ ನಾಗೇಶ ಹೆಗಡೆಯವರು ಮುನ್ನುಡಿ ಬರೆದಿದ್ದಾರೆ.

೨. ಅವಕಾಶ ಅಪಾರ
ಇದು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಲಭ್ಯವಿರುವ ಉದ್ಯೋಗಾವಕಾಶಗಳ ಬಗೆಗಿನ ಅಂಕಣ ಬರಹಗಳ ಸಂಕಲನ. ಅನಿಮೇಷನ್, ಡೇಟಾವೇರ್‌ಹೌಸಿಂಗ್, ಮೇನ್‌ಫ್ರೇಮ್ಸ್, ಬಿಸಿನೆಸ್ ಇಂಟೆಲಿಜೆನ್ಸ್ ಮುಂತಾದ ಕ್ಷೇತ್ರಗಳ ಬಗೆಗಿನ ಮೂವತ್ತಾರು ಲೇಖನಗಳಿರುವ ಈ ಪುಸ್ತಕಕ್ಕೆ ಡಾ.ಯು.ಬಿ.ಪವನಜರ ಮುನ್ನುಡಿ ಇದೆ.

ಧನ್ಯವಾದಗಳು.

---ತಮ್ಮ ವಿಶ್ವಾಸಿ,
ಟಿ ಜಿ ಶ್ರೀನಿಧಿ
srimysore@gmail.com

*Click on image to read the invitation

Disclaimer (ಮಿಸ್-ಕ್ಲೇಮರ್)

ಪ್ರಕಟಣೆಯನ್ನು ಕಳಿಸಿದವರಿಗೆ ಪತ್ರ ವ್ಯವಹಾರ ಮಾಡಿಯೇ ನಂತರ ಅವರ ಅನುಮತಿ ಪಡೆದುಕೊಂಡು ಪ್ರಕಟಿಸುತ್ತಿದ್ದೇನೆ. ಕೆಲವೊಂದು ಆಮಂತ್ರಣಗಳು ಖಾಸಗಿಯಾಗಿರಲೂ ಸಾಧ್ಯ. ಅಂತಹುಗಳಿಗೆ ಕರೆ ಮಾಡಿ ಖಾತ್ರಿ ಪಡೆದುಕೊಂಡೇ ಪ್ರಕಟಿಸುತ್ತಿದ್ದೇವೆ. ನಮ್ಮೆಲ್ಲರ ಪ್ರಯತ್ನದ ಮೇಲೆಯೂ ತಪ್ಪು ಘಟಿಸದಿರಲಿ ಎಂಬಂತೆ ಇದೊಂದು
Disclaimer:
"ಕೀಟಲೆ ಮಾಡೋರು, ಏಪ್ರಿಲ್ ಫೂಲ್ ಮಾಡೋರ ಬಗ್ಗೆ ನಾವು ಜವಾಬ್ದಾರರಲ್ಲ"