"ಮೊನ್ನೆ ಎಲ್ಲೋ ಬ್ಲಾಗಿಗರ ಕೂಟ ಇತ್ತಂತೆ...... ಅದೆಲ್ಲೋ ಡಿ.ವಿ.ಜಿ ಯವರ ಹುಟ್ಟುಹಬ್ಬದ ಕಾರ್ಯಕ್ರಮ ಆಯಿತಂತೆ.... ಜೋಗಿಯವರ ಪುಸ್ತಕ ಬಿಡುಗಡೆಗೆ ನೀವು ಹೋಗಿದ್ರಾ? ಯಾವಾಗ ಎಲ್ಲಿ ನಡೆಯಿತು?..... ಮೈಸೂರ ಮಲ್ಲಿಗೆ ನಾಟಕ ನೋಡುವಾಸೆ ತುಂಬಾ ಇತ್ತು, ಆದ್ರೆ ಅದ್ಯಾವಾಗ ಪ್ರಸಾರ ಆಯ್ತೋ ಗೊತ್ತೇ ಆಗಲಿಲ್ಲ " ಹೀಗೆಯೇ ಇನ್ನೂ ಅನೇಕ ಅಯ್ಯೋಗಳ ಪಟ್ಟಿ ಬೆಳೆಯುತ್ತೆ. ಇಂತಹ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಾವು ನಮಗೆ ಗೊತ್ತಾಗದೇ ಹೋದುದಕ್ಕಾಗಿ ಕಳೆದುಕೊಂಡಿದ್ದೇವೆ.
ಈ ಕೊರಗನ್ನು ನೀಗಿಸಲು ಏನು ಮಾಡಬಹುದು ಎಂದು ತಲೆ ಕೆರೆದುಕೊಂಡಾಗ ಹೊಳೆದಿದ್ದೇ 'ಇದೊಂದು ಪ್ರಕಟಣೆ' ಎಂಬ ಬ್ಲಾಗ್.
www.prakatane.blogspot.com
ಬೆಂಗಳೂರಿನಲ್ಲೇ ಆಗಲಿ, ಕರ್ನಾಟಕದಲ್ಲೇ ಆಗಲಿ ಅಥವಾ ಪ್ರಪಂಚದ ಯಾವುದೇ ಮೂಲೆಯಲ್ಲೇ ಆಗಲಿ ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಮ್ಮ 'ಇದೊಂದು ಪ್ರಕಟಣೆ' ಬ್ಲಾಗಿಗೆ ಕಳಿಸಿ. ನಾವು ಪ್ರಕಟಿಸುತ್ತೇವೆ.
ನೀವು ಮಾಡಬೇಕಾದುದಿಷ್ಟೇ. ನಿಮಗೆ ಯಾವುದಾದರೂ ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮದ ಬಗ್ಗೆ ತಿಳಿದಿದೆಯೇ prakatane@gmail.com ಗೆ ಒಂದು ಮಿಂಚಂಚೆ ಕಳಿಸಿ.
ನಿಮಗೆ ಈ ವಾರದಲ್ಲಿ/ವಾರಾಂತ್ಯದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದ ಬಗ್ಗೆ ತಿಳಿಯಬೇಕೆ? 'ಇದೊಂದು ಪ್ರಕಟಣೆಗೆ' ಭೇಟಿ ಕೊಡಿ.
ಇದು ನಿಮ್ಮಿಂದ ನಿಮಗಾಗಿ ನಿಮಗೋಸ್ಕರ ಹುಟ್ಟಿದ ಬ್ಲಾಗ್. ಇದರ ಜವಾಬ್ದಾರಿಯೂ ನಿಮ್ಮೆಲ್ಲರದೇ. ಈ ಬ್ಲಾಗು ನಡೆಯುವುದನ್ನು ಕಲಿಯುವವರೆಗೆ ನಾನು ನೋಡಿಕೊಳ್ಳುತ್ತೇನೆ. ಆಮೇಲೆ ಯಾರಾದರೂ ಕೈ ಜೋಡಿಸಬಹುದು.
10 comments:
EXCELLENT. I appreciate your Efforts of creating Blog for all Invitations.
It is really a good Idea. It helps not only Us, Everybody. If I get any Inviations in Future, Definitely I will fwd this to you.
I am really happy by your Idea.
--Ramachandra Hegde C.S
ನಮಸ್ತೆ,
ಈ ಬ್ಲಾಗನ್ನು ಬೆಳೆಸುವ ಜವಾಬ್ದಾರಿ ನಮ್ಮದು... ನಿಮ್ಮ ಈ ಪ್ರಯತ್ನ ಸಫಲವಾಗಲಿ...
ನಾನು ಕೂಡ ಪ್ರಕಟಣೆಗಳನ್ನು ಕಳುಹಿಸುತ್ತೇನೆ.
- Raಜಿ
ರಾಮಚಂದ್ರ ಮತ್ತು ರಾಜೇಶ ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು .
'ಇದೊಂದು ಪ್ರಕಟಣೆ' ಯ ಪ್ರಕಟಣೆ ಎಲ್ಲರಿಗೂ ತಲುಪಲಿ.
ಎ೦ಡಿ ಯವರೆ,
ಕಳ್ಸೋಣ ಬಿಡಿ.ನೀವೇನೂ ಯೋಚ್ನೆ ಮಾಡ್ಬೇಡಿ, ನಿಮ್ಮ ಪ್ರಯತ್ನಕ್ಕೆ ಶುಭವಾಗಲಿ."ಇದೊ೦ದು ಪ್ರಕಟಣೆ" ಯನ್ನ ನನ್ನ ಬ್ಲಾಗಿನಲ್ಲಿ ಪ್ರಕಟಿಸುತ್ತೇನೆ.
ತುಂಬಾ ಒಳ್ಳೇ ಪ್ರಯತ್ನ. ಎಂಡಿಯವರೆ,
ಈ ಬ್ಲಾಗನ್ನು ಸಂಪದದಲ್ಲಿ ಸೇರಿಸಿಕೊಳ್ಳಿ, ಬರಹದಲ್ಲೂ ಸೇರಿಸಿಬಿಡಿ...
ಹಾಗೆನೇ, ಬ್ಲಾಗಿನ ತಲೆಬರಹದಲ್ಲಿ ಯಾರು ಕೂಡ ಪ್ರಕಟಣೆ ಕಳುಹಿಸಬಹುದು ಅಂತನೂ ಹಾಕಿಬಿಡಿ.
ಆದ್ರೆ, ಕೀಟಲೆ ಮಾಡೋರು, ಏಪ್ರಿಲ್ ಫೂಲ್ ಮಾಡೋರ ಬಗ್ಗೆ ನಾವು ಜವಾಬ್ದಾರರಲ್ಲ ಅಂತ ಒಂದು Disclaimer ಕೂಡ ಹಾಕಿದ್ರೆ ಒಳ್ಳೆಯದಲ್ವಾ?
ಎಮ್ ಡಿ ಯವರೆ,
ಶ್ಲಾಘನೀಯ ವಿಚಾರ. ನನ್ನ ಪ್ರೋತ್ಸಾಹ ಇದೆ. ಧನ್ಯವಾದಗಳು.
@ಅಹರ್ನಿಶಿ, ನಿಮ್ಮೆಲ್ಲರ ಭರವಸೆಯಿಂದಲೇ ಈ ವಿಚಾರ ಬ್ಲಾಗ್ ರೂಪತಾಳಿದ್ದು.
ಮತ್ತೆ ನಿಮ್ಮ ಬ್ಲಾಗಿನಲ್ಲೂ ಕೊಂಡಿ ಕೊಟ್ಟಿದ್ದಕ್ಕೆ ಧನ್ಯವಾದ ಹೇಳಬೇಕಾಗಿಲ್ಲ್ಲ ತಾನೆ?
@ಅಸತ್ಯಾನ್ವೇಶಿ,
ಖಂಡಿತವಾಗಿಯೂ. ನಿಮ್ಮ ಸಲಹೆಯನ್ನು ಕಾರ್ಯರೂಪಕ್ಕೆ ತಂದಿದ್ದೇನೆ.
ಹಾಂ, ನೀವು ಕರೆಕ್ಟಾಗಿ ಹೇಳಿದಿರಿ. ಆರಂಭದಿಂದಲೇ ಓದುಗರಿಗೆ ಅನುಮಾನಾಸ್ಪದವಾಗಿ ಶುರುವಾಗಬಾರದೆಂದು ಇದನ್ನು ತಪ್ಪಿಸಿದ್ದೆ.
ಪ್ರಕಟಣೆಯನ್ನು ಕಳಿಸಿದವರಿಗೆ ನಾನು ಪತ್ರ ವ್ಯವಹಾರ ಮಾಡಿಯೇ ನಂತರ ಅವರ ಅನುಮತಿ ಪಡೆದುಕೊಂಡು ಪ್ರಕಟಿಸುತ್ತಿದ್ದೇನೆ.
ಕೆಲವೊಂದು ಆಮಂತ್ರಣಗಳು ಖಾಸಗಿಯಾಗಿರಲೂ ಸಾಧ್ಯ. ಅಂತಹುಗಳಿಗೆ ಕರೆ ಮಾಡಿ ಖಾತ್ರಿ ಪಡೆದುಕೊಂಡೇ ಪ್ರಕಟಿಸುವ ಇರಾದೆ ಇದೆ.
ನಮ್ಮೆಲ್ಲರ ಪ್ರಯತ್ನದ ಮೇಲೆಯೂ ತಪ್ಪು ಘಟಿಸದಿರಲಿ ಎಂಬಂತೆ ನೀವು ತಿಳಿಸಿದ Disclaimer ಹಾಕೋದು ಸೂಕ್ತವಾಗಿದೆ ಅನಿಸುತ್ತೆ.
@ರಾಜೇಶ್,
ನಿಮ್ಮ ಬ್ಲಾಗಿನಲ್ಲೂ ಕೊಂಡಿ ಕೊಟ್ಟಿದ್ದಕ್ಕೆ ಧನ್ಯವಾದಗಳು.
ನಿಮ್ಮೆಲ್ಲರ ಪ್ರೋತ್ಸಾಹ ಬೇಕೇ ಬೇಕು. Because this is 'from the people, by the people, for the people'
M.D,
ಬಹಳ ಒಳ್ಳೆಯ ಪ್ರಯತ್ನ. ಮುಂದುವರೆಸಿ.
ನಿಜಕ್ಕೂ ಒಳ್ಳೆಯ ಪ್ರಯತ್ನ. ಇಂತದೊಂದು ಬ್ಲಾಗಿನ ಅವಶ್ಯಕತೆ ನಮಗೆಲ್ಲರಿಗೂ ಇತ್ತು. ನಿಮಗೆ ಶುಭವಾಗಲಿ.
-ಮಾಕೆಂ
Post a Comment