Tuesday, July 15, 2008

ಪ್ರಕಟಣೆ - ೨೨



ಮಾನ್ಯರೆ,

ನಿಮಗೆಲ್ಲರಿಗೂ ಟಿ.ಜಿ.ಶ್ರೀನಿಧಿಯವರಿಂದ ಒಂದು ಆತ್ಮೀಯ ಆಮಂತ್ರಣ.

ಯುವ ವಿಜ್ಞಾನ ಬರಹಗಾರ ಹಾಗೂ ಸಾಫ್ಟ್‌ವೇರ್ ತಂತ್ರಜ್ಞ ಟಿ.ಜಿ.ಶ್ರೀನಿಧಿಯವರ ಹೊಸ ಪುಸ್ತಕಗಳು - 'ವೆಬ್ ವಿಹಾರ' ಹಾಗೂ 'ಅವಕಾಶ ಅಪಾರ' - ಬರುವ ಜುಲೈ ೨೦ ರಂದು ಸಂಜೆ ಬೆಂಗಳೂರು ಬಸವನಗುಡಿಯ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನಲ್ಲಿ ಬಿಡುಗಡೆಯಾಗಲಿವೆ.

ಕಾರ್ಯಕ್ರಮದಲ್ಲಿ ಹಿರಿಯ ವಿಜ್ಞಾನ ಬರಹಗಾರರಾದ ಶ್ರೀ ನಾಗೇಶ ಹೆಗಡೆ, ಟಿ ಆರ್ ಅನಂತರಾಮು, ಕೊಳ್ಳೇಗಾಲ ಶರ್ಮ ಹಾಗೂ 'ವಿಶ್ವಕನ್ನಡ ಡಾಟ್ ಕಾಂ'ನ ಡಾ.ಯು.ಬಿ.ಪವನಜ ಉಪಸ್ಥಿತರಿರಲಿದ್ದಾರೆ.

ಹವ್ಯಾಸಿ ವಿಜ್ಞಾನ ಬರಹಗಾರರಾದ ಟಿ.ಜಿ.ಶ್ರೀನಿಧಿಯವರ ಮುನ್ನೂರಕ್ಕೂ ಹೆಚ್ಚು ಲೇಖನಗಳು ಹಾಗೂ ಎರಡು ಪುಸ್ತಕಗಳು ಈಗಾಗಲೇ ಪ್ರಕಟವಾಗಿವೆ. ಅವರು 'ಇ-ಜ್ಞಾನ' ಎಂಬ ವಿಜ್ಞಾನಕ್ಕೆ ಸಂಬಂಧಪಟ್ಟ ಕನ್ನಡ ಬ್ಲಾಗನ್ನೂ ನಡೆಸುತ್ತಿದ್ದಾರೆ.

ಬಿಡುಗಡೆಯಾಗುತ್ತಿರುವ ಹೊಸ ಪುಸ್ತಕಗಳ ಪರಿಚಯ ಹೀಗಿದೆ:

೧. ವೆಬ್ ವಿಹಾರ - ಅಂತರಜಾಲ ಲೋಕಕ್ಕೊಂದು ಬೆಳಕಿಂಡಿ
ಇದು ಅಂತರಜಾಲ (ಇಂಟರ್ ನೆಟ್) ಹಾಗೂ ವಿಶ್ವವ್ಯಾಪಿ ಜಾಲದ (WWW) ಸಂಕ್ಷಿಪ್ತ ಪರಿಚಯ ನೀಡಿ ಅದರ ಅನೇಕ ಸೌಲಭ್ಯಗಳನ್ನು ಬಳಸಲು ಓದುಗರಿಗೆ ನೆರವಾಗುವ ಪುಸ್ತಕ. ಮಾಹಿತಿ ಎಂದರೇನು ಎಂಬಲ್ಲಿಂದ ಪ್ರಾರಂಭಿಸಿ ಗಣಕ ಜಾಲಗಳು, ಅಂತರಜಾಲದ ಹುಟ್ಟು, ವಿಶ್ವವ್ಯಾಪಿ ಜಾಲ ಬೆಳೆದ ಬಗೆ, ಇಮೇಲ್, ಬ್ಲಾಗಿಂಗ್, ಇ-ಶಾಪಿಂಗ್, ಆನ್‌ಲೈನ್ ಬ್ಯಾಂಕಿಂಗ್,ಬ್ಲಾಗಿಂಗ್, ವಿಶ್ವವ್ಯಾಪಿ ಜಾಲವನ್ನು ಕಾಡುತ್ತಿರುವ ಸಮಸ್ಯೆಗಳು (ವೈರಸ್, ಫಿಷಿಂಗ್, ಮಾಲ್‌ವೇರ್, ಸ್ಪಾಮ್ ಇತ್ಯಾದಿ) ಮುಂತಾದ ಅನೇಕ ವಿಷಯಗಳನ್ನು ಇದು ವಿವರಿಸುತ್ತದೆ. ವಿಶ್ವವ್ಯಾಪಿ ಜಾಲದಲ್ಲಿ ಕನ್ನಡದ ಸ್ಥಿತಿಗತಿಗಳ ಬಗೆಗೂ ಬಹಳಷ್ಟು ಮಾಹಿತಿ ಇದೆ. ಅಂತರಜಾಲದಲ್ಲಿ ಕನ್ನಡದ ಬಳಕೆ ಬೆಳೆದುಬಂದ ಹಾದಿಯ ಹಿನ್ನೋಟದ ಜೊತೆಗೆ ಕನ್ನಡದ ಪ್ರಮುಖ ತಾಣಗಳ ಹಾಗೂ ಕುತೂಹಲಕರ ಬ್ಲಾಗುಗಳ ಪಟ್ಟಿ ಕೂಡ ಇದೆ. ಶ್ರೀ ನಾಗೇಶ ಹೆಗಡೆಯವರು ಮುನ್ನುಡಿ ಬರೆದಿದ್ದಾರೆ.

೨. ಅವಕಾಶ ಅಪಾರ
ಇದು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಲಭ್ಯವಿರುವ ಉದ್ಯೋಗಾವಕಾಶಗಳ ಬಗೆಗಿನ ಅಂಕಣ ಬರಹಗಳ ಸಂಕಲನ. ಅನಿಮೇಷನ್, ಡೇಟಾವೇರ್‌ಹೌಸಿಂಗ್, ಮೇನ್‌ಫ್ರೇಮ್ಸ್, ಬಿಸಿನೆಸ್ ಇಂಟೆಲಿಜೆನ್ಸ್ ಮುಂತಾದ ಕ್ಷೇತ್ರಗಳ ಬಗೆಗಿನ ಮೂವತ್ತಾರು ಲೇಖನಗಳಿರುವ ಈ ಪುಸ್ತಕಕ್ಕೆ ಡಾ.ಯು.ಬಿ.ಪವನಜರ ಮುನ್ನುಡಿ ಇದೆ.

ಧನ್ಯವಾದಗಳು.

---ತಮ್ಮ ವಿಶ್ವಾಸಿ,
ಟಿ ಜಿ ಶ್ರೀನಿಧಿ
srimysore@gmail.com

*Click on image to read the invitation

Thursday, July 3, 2008

ಪ್ರಕಟಣೆ - ೨೧




ಮಾನ್ಯರೇ,
ಎಸ್.ಒ.ಎಸ್.ಮಕ್ಕಳ ಗ್ರಾಮದ ಸಹಾಯ ನಿಧಿಯ ಉದ್ದೇಶದಿಂದ ಭಾವನೆಗಳಿಗೆ ಬಣ್ಣದ ಚಿತ್ತಾರ ಬೆರಸಿ,ಒಡಮೂಡಿದ ಕಲಾಕೃತಿಗಳನ್ನು ಕಣ್ತುಂಬ ನೋಡಿ,ಮನತುಂಬಾ ಹರಸುವಿರೆಂಬ ಆಶಯದೊಂದಿಗೆ ನಿಮ್ಮನ್ನು ನಮ್ಮ ಚಿತ್ರ ಪ್ರದರ್ಶನ ಕಾರ್ಯಕ್ರಮಕ್ಕೆ ಆಹ್ವಾನ ನೀಡುತ್ತಿದ್ದೇನೆ.

ಚಿತ್ರ ಪ್ರದರ್ಶನ : ಸ್ತ್ರೀತ್ವದ ಚಿತ್ರ ವ್ಯಾಖ್ಯೆ
ಶಿಲ್ಪ ಕಲಾಕೃತಿಗಳ ಪ್ರದರ್ಶನ : ಬಾಲಕಾಂಡದ ಮೋಜು ಹಾಗೂ ಕಲ್ಪನೆ
ಉದ್ಘಾಟಕರು : ಶ್ರೀ ಕೆ.ವಿ. ಸುಬ್ರಮಣ್ಯಂ,
ಖ್ಯಾತ ವಿಮರ್ಶಕರು
ಅತಿಥಿಗಳು : ಶ್ರೀ ಎಂ. ಕೆ. ಲೋಕೇಶ್,
ನಿರ್ದೇಶಕರು,
ಎಸ್.ಓ.ಎಸ್. ಮಕ್ಕಳ ಗ್ರಾಮ.

ಜುಲೈ ೩ ರ, ಬೆಳಿಗ್ಗೆ ೧೧ ಗಂಟೆಗೆ
ಚಿತ್ರಕಲಾ ಪರಿಷತ್, ಗ್ಯಾಲರಿ -೧,
ಕುಮಾರ ಕೃಪ ರಸ್ತೆ, ಬೆಂಗಳೂರು-೫೬೦೦೦೧

ನನ್ನೊಂದಿಗೆ ಕುಂಚಕಲಾವಿದರಾದ ಸಿ.ಎಸ್.ಶಶಿಧರ್, ಜೆ. ಕಡೂರ್, ರಾಘ್ ಪುತ್ತೂರ್ ಹಾಗೂ ಶಿಲ್ಪಿ ಡಿ.ರಂಗಸ್ವಾಮಿ ನಿಮ್ಮ ಬರುವಿಕೆಗಾಗಿ ದಾರಿ ಕಾಯುತ್ತಿರುತ್ತೇವೆ.

ಪ್ರದರ್ಶನವು ದಿನಾಂಕ ೩ , ೪ , ೫ ಹಾಗೂ ೬ ರ ಜುಲೈ ೨೦೦೮ ಬೆಳಗ್ಗೆ ೧೦ ರಿಂದ ಸಂಜೆ ೭ ರ ವರೆಗೆ ತೆರೆದಿರುತ್ತದೆ.

--ನಿಮ್ಮವ,
ಪ್ರಮೋದ್. ಪಿ. ಟಿ
ಕುಂಚ-ಪ್ರಪಂಚ.
www.kuncha-prapancha.blogspot.com

Thursday, June 19, 2008

ಪ್ರಕಟಣೆ - ೨೦



ಐಟಿರಂಗ ಕನ್ನಡಿಗರಿಗೆ ಟೀ ಶರ್ಟ್ ನಲ್ಲಿ ಕನ್ನಡ ಮೂಡಿಸಿ ಚಿರಪರಿಚಿತ ಕ್ರಿಯಾಶೀಲ ನಿರ್ಮಾಪಕ ಸಾಕ್ಷಿರಾಜ್ ಅಲಿಯಾಸ್ ರಾಜ್ ಕುಮಾರ್ ಪ್ರಸ್ತುತಪಡಿಸುವ ಕಿರುಚಿತ್ರ

"ನಂ ಪ್ರೀತಿ"... ನಿರೀಕ್ಷೆ ಕೂಡದು
ಚಿತ್ರದ ಹೆಸರು 'ನಂ ಪ್ರೀತಿ' ಅಂತ. ಚಿತ್ರದ ಸಬ್ ಟೈಟಲ್ 'ನಿರೀಕ್ಷೆ ಕೂಡದು'!.
ಒಂದೇ ದಿನ ಕೇವಲ ೭ ಗಂಟೆಗಳಲ್ಲಿ 'ನಂ ಪ್ರೀತಿ' ಚಿತ್ರೀಕರಣಗೊಂಡಿದೆ. ಚಿತ್ರದ ಖರ್ಚು ಕೇವಲ ೨೦ ಸಾವಿರ ರು.ಗಳು.
೨೦ ನಿಮಿಷ ಕಾಲಾವಧಿ ಯ ಈ ಚಿತ್ರದಲ್ಲಿ ೩ ಹಾಡುಗಳು ಇವೆ.

ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ, ನಿರ್ದೇಶನ ಕವೀಶ್ ಶೃಂಗೇರಿ ಅವರದ್ದು. ನಾಯಕ ನಟನಾಗಿ ಕುಶಾಲ್ ರಾಘವೇಂದ್ರ ಹಾಗೂ ನಾಯಕಿಯಾಗಿ ನಿರ್ಮಲಾ ನಟಿಸಿದ್ದಾರೆ. ಛಾಯಾಗ್ರಹಣ ಸುನಿಲ್ ಶಿವಮೊಗ್ಗ , ಚಿತ್ರಕ್ಕೆ ಸಂಗೀತ ಆನಂದ ಎನ್.ಕುಮಾರ್. ನಿರ್ಮಾಪಕ ಸಾಕ್ಷಿರಾಜ್.

'ನಂ ಪ್ರೀತಿ' ಚಿತ್ರದ ಪ್ರೀಮಿಯರ್ ಷೋ
ಇದೇ ಭಾನುವಾರ ಜೂ.೨೨ ಸಂಜೆ ೪ ಗಂಟೆಗೆ ಸುಚಿತ್ರಾ ಫಿಲ್ಮ್ ಸೊಸೈಟಿಯಲ್ಲಿ ಆಯೋಜಿಸಲಾಗಿದೆ. ತಪ್ಪದೆ ಹೋಗಿ ವೀಕ್ಷಿಸಿ.
ಚಿತ್ರತಂಡದೊಂದಿಗಿನ ಸಂವಾದದಲ್ಲಿ ಭಾಗವಹಿಸಿ ನಿಮ್ಮ ಕುತೂಹಲವನ್ನು ತಣಿಸಿಕೊಳ್ಳಿ.
-----------------------------------------------------------------------------------------------
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ:
ರಾಜ್ ಕುಮಾರ್: ೯೪೪೮೧ ೭೧೦೬೯ [9448171069]
ರಾಘವೇಂದ್ರ: ೯೮೮೬೬ ೮೩೦೦೮ [9886683008]
------------------------------------------------------------------

Thursday, June 12, 2008

ಪ್ರಕಟಣೆ - ೧೯



ಅರ್ಪಿಸುವ ಹೊಸ ನಾಟಕ

ಬಿಡಿ, ನಾನು ದೇವರಾಗಿರಬಲ್ಲೆ
(ಮಾನವನಂತಿರಲು ಬಂದ ದೇವರು)

ನಿರ್ದೇಶನ: ಹಿರಿಯಣ್ಣಯ್ಯ ಹಾರನಹಳ್ಳಿ
(ಖ್ಯಾತ ರಂಗಭೂಮಿ/ಕಿರುತೆರೆ/ಹಿರಿತೆರೆ ನಟರು)

ಸಂಗೀತ: ಶಶಿಧರ ಕೋಟೆ

ನೃತ್ಯ ಸಂಯೋಜನೆ: ದೀಪಾ ನಾರಾಯಣ್

ನಾಟಕದ ಅವಧಿ: ೯೫ ನಿಮಿಷಗಳು

ದಿನಾಂಕ: ೧೪ ನೇ ಜೂನ್ ಶನಿವಾರ ಮತ್ತು ೧೫ ನೇ ಜೂನ್ ರವಿವಾರ ಭಾನುವಾರ

ವೇಳೆ: ಸಂಜೆ ೬. ೪೫ಕ್ಕೆ

ಸ್ಥಳ: ಡಾ ಹೆಚ್. ಎನ್. ಕಲಾಕ್ಷೇತ್ರ
ನ್ಯಾಷನಲ್ ಕಾಲೇಜು, ಜಯನಗರ
ಬೆಂಗಳೂರು.

ಪ್ರವೇಶ ದರ : ರೂ ೫೦/-

ನೀವೂ ಬನ್ನಿ, ನಿಮ್ಮವರನ್ನೂ ಕರೆತನ್ನಿ
-----------------------------------------------------------------------------------
ಟಿಕೇಟ್ ಗಳಿಗಾಗಿ ಸಂಪರ್ಕಿಸಿ:
ಅಖಿಲಾ: ೯೮೮೦೨ ೭೭೪೭೦ [98802 77470]
ಮಧು: ೯೯೮೦೯ ೦೯೬೮೧ [99809 09681]
ಅರುಣ್: ೯೯೦೦೧ ೦೭೦೯೦ [99001 07090]
ಎಂ.ಡಿ: ೯೯೦೦೫ ೬೩೨೪೨ [99005 63242]
-----------------------------------------------------------------------------------

ಪ್ರಕಟಣೆ - ೧೮





ಕವನ ಸಂಕಲನದ ಬಿಡುಗಡೆ ಸಮಾರಂಭ

ಸ್ಥಳ : ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್
ಬಿ.ಪಿ.ವಾಡಿಯ ರಸ್ತೆ,
ಬಸವನಗುಡಿ ಪೋಲಿಸ್ ಸ್ಟೇಶನ್ ಹತ್ತಿರ,
ಬಸವನಗುಡಿ, ಬೆಂಗಳೂರು

ದಿನ : ಶನಿವಾರ, 14 ಜೂನ್ 2008

ಸಮಯ : ಬೆಳಿಗ್ಗೆ ೧೦:೩೦ರಿಂದ

ನೀವೂ ಬನ್ನಿ ....ನಿಮ್ಮ ಸ್ನೇಹಿತರನ್ನೂ ಜೊತೆಗೆ ಕರೆತನ್ನಿ

ಪುಸ್ತಕ ಬಿಡುಗಡೆ ಮತ್ತು ಸಭೆಯ ಅಧ್ಯಕ್ಷತೆ.....??

ಬಿಡುಗಡೆಯ ದಿನದಂದು ಬಂದು ನೋಡಿ !!!

ದಯವಿಟ್ಟು ನಿಮ್ಮ ಸ್ನೇಹಿತರಿಗೂ ಕಳಿಸಿ...

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ವಿಜಯ್ ರಾಜ್ ಕನ್ನಂತ್ - ೯೭೩೯೦೯೯೪೩೨ [9739099432]

*Click on image to read the invitation

Monday, June 2, 2008

ಪ್ರಕಟಣೆ-೧೭





ಆತ್ಮೀಯರೆ,
ಸೃಜನಶೀಲತೆಯ ಹುಡುಕಾಟದಲ್ಲಿ ತಿಂಗಳ ಪತ್ರಿಕೆ 'ಚೈತ್ರರಶ್ಮಿ'ಯ ಭಾವಯಾನಕ್ಕೆ ನಾಲ್ಕು ವರ್ಷ ತುಂಬಿದ ಸಂಭ್ರಮ. ಸಾಹಿತ್ಯ, ಸಂಸ್ಕೃತಿ,ಸೃಜನಶೀಲತೆ,ದೇಶಭಕ್ತಿ ಮುಂತಾದ ಸದ್ವಿಚಾರಗಳ ಚಿಂತನ-ಮಂಥನ ಆಶಯದೊಂದಿಗೆ, ಅವಕಾಶವಂಚಿತ ಗ್ರಾಮೀಣ ಪ್ರತಿಭಾವಂತರಿಗೆ ವೇದಿಕೆಯಾಗುವ ಕನಸಿನೊಂದಿಗೆ 'ಚೈತ್ರರಶ್ಮಿ' ಕ್ರಿಯಾಶೀಲವಾಗಿ ಮುನ್ನಡೆದಿದೆ.

'ಚೈತ್ರರಶ್ಮಿ' ಪತ್ರಿಕೆಗೆ ನಾಲ್ಕು ತುಂಬುವ ಈ ಸಂಭ್ರಮದ ಕ್ಷಣಗಳಲ್ಲಿ ನಾವೆಲ್ಲಾ ಒಂದೆಡೆ ಸೇರಬೇಕು ಎಂಬ ಬಯಕೆ ನಮ್ಮೆಲ್ಲರದು.

ಬರುವ ಜೂನ್ ೮ ರ ಭಾನುವಾರ ಸಂಜೆ ಬೆಂಗಳೂರಿನ ಜೆ.ಸಿ.ರಸ್ತೆಯ 'ನಯನ ಸಭಾಂಗಣ'ದಲ್ಲಿ ಕಾರ್ಯಕ್ರಮವಿದೆ. ಅಲ್ಲಿ 'ವಾರ್ಷಿಕ ಸಂಚಿಕೆಯ ಬಿಡುಗಡೆ'ಯ ಜೊತೆಗೆ ಚೈತ್ರರಶ್ಮಿಯ ವೆಬ್ ಸೈಟ್ ಅನಾವರಣ ಹಾಗೂ ಯಾವುದೇ ಪ್ರಚಾರವಿಲ್ಲದೆ ನಿಸ್ವಾರ್ಥವಾಗಿ ಸಮಾಜದ ಕೆಲಸ ಮಾಡುತ್ತಿರುವ ನಾಲ್ವರು ಮಹನೀಯರು ಮತ್ತು ನಾಲ್ಕು ಸಂಘಟನೆಗಳಿಗೆ ಚೈತ್ರರಶ್ಮಿಯ ಗೌರವ ಸಮರ್ಪಣೆ. ಜತೆಗೊಂದಿಷ್ಟು ಮನತಣಿಸುವ ಕಾರ್ಯಕ್ರಮ.

ಚೈತ್ರರಶ್ಮಿಯ ನಾಲ್ಕನೇ ವರ್ಷಸಂಭ್ರಮಕ್ಕೆ ಸಾಕ್ಷಿಯಾಗಲು ನೀವು ನಮ್ಮ ಜತೆಗಿರಬೇಕು ಎಂಬುದು ನಮ್ಮೆಲ್ಲರ ಕೋರಿಕೆ,ಆರಿಕೆ,ಹಾರೈಕೆ.

ದಿನಾಂಕ: ೮ ನೇ ಜೂನ್ ಭಾನುವಾರ
ಸಮಯ: ಸಂಜೆ ೪.೩೦ ಕ್ಕೆ
ಸ್ಥಳ: ನಯನ ಸಭಾಂಗಣ,
'ಕನ್ನಡ ಭವನ' (ರವೀಂದ್ರ ಕಲಾಕ್ಷೇತ್ರದ ಪಕ್ಕ)
ಜೆ.ದಿ ರಸ್ತೆ. ಬೆಂಗಳೂರು.

ನಮ್ಮೊಂದಿಗೆ:
ಶ್ರೀ ವಸುಧೇಂದ್ರ (ಖ್ಯಾತ ಕನ್ನಡ ಕಥೆಗಾರರು)
ಶ್ರೀ ಚಕ್ರವರ್ತಿ ಸೂಲಿಬೆಲೆ (ಬರಹಗಾರರು ಮತ್ತು ಅಂಕಣಕಾರರು)
ಶ್ರೀ ಎಂ.ಜಿ.ಅರುಣ(ಪ್ರಕಾಶಕರು 'ಸಾಹಿತ್ಯ ಭಂಡಾರ')

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಶ್ರೀ ರಾಮಚಂದ್ರ ಹೆಗಡೆ (ಸಂಪಾದಕರು 'ಚೈತ್ರ ರಶ್ಮಿ')
ಮೊಬೈಲ್:೯೯೮೬೩೭೨೫೦೩(9986372503)

*Click on image to read the invitation

Sunday, June 1, 2008

ಪ್ರಕಟಣೆ-೧೬

ನಮಸ್ಕಾರ , ನಿಮಗೊಂದು ಆಹ್ವಾನ ಪತ್ರಿಕೆ..

ಕನ್ನಡಸಾಹಿತ್ಯ.ಕಾಂ ತನ್ನ ಎಂಟನೇ ವಾರ್ಷಿಕೊತ್ಸವದ ಅಂಗವಾಗಿ ಜೂನ್ ಎಂಟರಂದು ಕ್ರೈಸ್ಟ್ ಕಾಲೇಜಿನಲ್ಲಿ ಒಂದು ದಿನದ ವಿಚಾರ ಸಂಕಿರಣವನ್ನು ಏರ್ಪಡಿಸುತ್ತಿದೆ.
ವಿಷಯ:
ಅಂತರ್ಜಾಲದ ಸಂಧರ್ಭದಲ್ಲಿ, ಪ್ರಾದೇಶಿಕ ಭಾಷೆಯಲ್ಲಿ ಸೃಜನಶೀಲತೆ: ಗತಿಸ್ಥಿತಿ ಸವಾಲು.

ಕಾರ್ಯಕ್ರಮಕ್ಕೆ ಸೀಮಿತ ಆಸನಗಳು ಲಭ್ಯವಿರುವ ಕಾರಣ ಭಾಗವಹಿಸಲು ಆಸಕ್ತಿ ಇರುವವರು ದಯಮಾಡಿ ಮುಂಚಿತವಾಗಿ ಕೆಳಗೆ ಕೊಟ್ಟಿರುವ ಲಿಂಕ್‍ನಲ್ಲಿ ರಿಜಿಸ್ಟರ್ ಮಾಡಿಕೊಳ್ಳಿ.

http://saadhaara.com/events/index/english
http://saadhaara.com/events/index/kannada

ಸಮಾರಂಭದಲ್ಲಿ ಭಾಗವಹಿಸಲು ನೋಂದಾವಣೆ ಕಡ್ಡಾಯ.

ಉತ್ಸಾಹ ಮತ್ತು ಸಮಯ ಇದ್ದರೆ ವಿಚಾರಸಂಕಿರಣದ ನಂತರ ಅನೌಪಚಾರಿಕವಾಗಿ ಬ್ಲಾಗಿಗಳಿಗೆ 'ಬ್ಲಾಗೀ ಮಾತುಕತೆ' ನಡೆಸುವ ಉದ್ದೇಶವೂ ಇದೆ.

ದಿನಾಂಕ: ೮ ನೇ ಜೂನ್ ೨೦೦೮ , ರವಿವಾರ
ಸ್ಥಳ: ಕ್ರೈಸ್ಟ್ ಕಾಲೇಜು,
ಬೆಂಗಳೂರು ಡೇರಿ ಹತ್ತಿರ. ಬೆಂಗಳೂರು.

ನೀವೂ ಬನ್ನಿ ಮತ್ತು ಆಸಕ್ತಿಯಿರುವ ನಿಮ್ಮ ಗೆಳೆಯರನ್ನು ಕರೆತನ್ನಿ.

-ಕನ್ನಡಸಾಹಿತ್ಯ.ಕಾಂ ಬಳಗ

Disclaimer (ಮಿಸ್-ಕ್ಲೇಮರ್)

ಪ್ರಕಟಣೆಯನ್ನು ಕಳಿಸಿದವರಿಗೆ ಪತ್ರ ವ್ಯವಹಾರ ಮಾಡಿಯೇ ನಂತರ ಅವರ ಅನುಮತಿ ಪಡೆದುಕೊಂಡು ಪ್ರಕಟಿಸುತ್ತಿದ್ದೇನೆ. ಕೆಲವೊಂದು ಆಮಂತ್ರಣಗಳು ಖಾಸಗಿಯಾಗಿರಲೂ ಸಾಧ್ಯ. ಅಂತಹುಗಳಿಗೆ ಕರೆ ಮಾಡಿ ಖಾತ್ರಿ ಪಡೆದುಕೊಂಡೇ ಪ್ರಕಟಿಸುತ್ತಿದ್ದೇವೆ. ನಮ್ಮೆಲ್ಲರ ಪ್ರಯತ್ನದ ಮೇಲೆಯೂ ತಪ್ಪು ಘಟಿಸದಿರಲಿ ಎಂಬಂತೆ ಇದೊಂದು
Disclaimer:
"ಕೀಟಲೆ ಮಾಡೋರು, ಏಪ್ರಿಲ್ ಫೂಲ್ ಮಾಡೋರ ಬಗ್ಗೆ ನಾವು ಜವಾಬ್ದಾರರಲ್ಲ"